ಮಂಗಳವಾರದಿಂದೀಚೆಗೆ ತ್ವೇಷಮಯವಾಗಿರುವ ರಾಜಸ್ಥಾನದಲ್ಲಿ ಹಿಂಸಾಚಾರ ಮುಂದುವರಿದರುವಂತೆಯೇ, ಗಂಭೀರ ವಾಚತಾವರಣವಿರುವ ಎರಡು ಜಿಲ್ಲೆಗಳಲ್ಲಿ 'ಕಂಡಲ್ಲಿ ಗುಂಡಿಕ್ಕಲು ಆದೇಶ' ನೀಡಲಾಗಿದೆ.
ಹಿಂಸಾಚಾರ, ಬೆಂಕಿಯಿಡುವ ಪ್ರಕರಣ ತೀವ್ರ ಅನಿಯಂತ್ರಿತ ವಾಗಿರುವ ಸವಾಯಿ ಮಾಧೋರ್‌ಪುರ್ ಹಾಗೂ ಭರತ್ ಪುರ್ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ದುಷ್ಕರ್ಮಿಗಳನ್ನು ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಈ ಆದೇಶ ನೀಡಿದೆ. ಪ್ರದೇಶದಲ್ಲಿ ಸೂಕ್ಷ್ಮ ಸ್ಥಿತಿ ಮಂದುವರಿದಿರವುದರಿಂದ ಪ್ರಸ್ತುತ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಹಿಂಸಾಚಾರ ಆರಂಭಿಸಿದ ಮಂಗಳವಾರದಿಂದ ಈ ವರೆಗೆ ಒಟ್ಟು 23 ಮಂದಿ ಸಾವನ್ನಪಪಿದ್ದಾರೆ. ಅವರಲ್ಲಿ ಇಬ್ಬರು ಪೊಲೀಸ್ ಸಿಬ್ಬಂಧಿ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತನ್ಮಧ್ಯೆ ಕಳೆದ ರಾತ್ರಿಯಿಂದ ಗಲಭೆ ಪೀಡಿತ ಪ್ರದೇಶದಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿ ಗುಂಪು ಸೇರುವುದು, ಮಾರಕಾಯುಧ ಸಾಗಣೆ, ಹಿಂಸಾಚಾರವನನು ಪ್ರತಿಬಂಧಿಸಲಾಗಿದೆ.
ಹಿಂದುಳಿದ ಗುರ್ಜರ ಸಮುದಾಯದ ಸಹಸ್ರಾರು ಮಂದಿ ಪ್ರಸ್ತುತ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಮಂಗಳವಾರದಂದು ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದರು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದು ಗೋಲಿ ಬಾರ್, ಮತ್ತಿತರ ಅಹಿತಕರ ಘಟನೆಗಳು ಸಂಭವಿಸಿದ್ದುವು.
|