ಉತ್ತರ ಕಾಶ್ಮೀರದ ಬಾರಮುಲ್ಲಾದಲ್ಲಿ ಸಂಭವಿಸಿದ ಭಾರತೀಯ ಸೈನಿಕರು ಮತ್ತು ಲಷ್ಕರ್ ಇ ತೋಯ್ಬಾ ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಭದ್ರತ ಪಡೆಯ ಇಬ್ಬರು ಹುತಾತ್ಮರಾಗಿದ್ದು, ಇಬ್ಬರು ಉಗ್ರಗಾಮಗಳು ಹತರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಹುತಾತ್ಮರಾದ ಭದ್ರತಾ ಪಡೆಯವರಲ್ಲಿ ಓರ್ವ ಸೈನಿಕ, ಓರ್ವ ಪೊಲೀಸ ಸಿಬ್ಬಂಧಿ ಎಂದು ತಿಳಿಸಲಾಗಿದೆ. ಬಾರಮುಲ್ಲಾ ಜಿಲ್ಲೆಯ ಶೀರಿ ಎಂಬಲ್ಲಿನ ಬೆಟ್ಟ ಪ್ರದೇಶದಲ್ಲಿ ಪ್ರಸ್ತುತ ಕಾರ್ಯಾಚರಣೆ ಸಂಭವಿಸಿದೆ.
ಪ್ರದೇಶದಲಲಿ ಅವಿತಿಟ್ಟಿದ್ದ ಉಗ್ರಗಾಮಿ ತಂಡವನ್ನು ಹುಡುಕಿ ಮಟ್ಟ ಹಾಕುವ ಪ್ರಯತ್ನದ ಅಂಗವಾಗಿ ಪ್ರಸ್ತುತ ಕಾರ್ಯಚರಣೆ ನಡೆಸಲಾಗಿತ್ತು. ಗುಂಡಿನ ಘರ್ಷಣೆಯ ವೇಳೆ 6 ಮಂದಿ ಇತರ ಸಿಬ್ಬಂದಿಗಳು ತೀವ್ರ ಗಾಯಗೊಂಡಿದ್ದಾರೆ.
|