ಸರ್ಕಾರಿ ನೌಕರರಿಗೆ ಹುದ್ದೆಯಲ್ಲಿ ಮುಂಬಡ್ತಿ ಪಡೆಯುವುದು ಮೂಲಭೂತ ಹಕ್ಕೇನಲ್ಲ. ಬಡ್ತಿಗೆ ಅಗತ್ಯವಿರುವ ಅರ್ಹತೆ , ಇನ್ನಿತರ ಮಾನದಂಡಗಳನ್ನು ಹೊಂದಿದ್ದರೆ ಮಾತ್ರ ನೌಕರ ಅರ್ಹನಾಗುತ್ತಾನೆ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.
ಮಿಝೋರಾಂ ಸರ್ಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್ ಡಿ ಮಜೂಂದಾರ್ ಅವರ ಮುಂಬಡ್ತಿ ಕುರಿತಾದ ವಿವಾದವನ್ನು ಪರಿಶೀಲಿಸಿದ ನ್ಯಾಯಾಲಯ ಈ ತೀರ್ಪಿತ್ತಿದೆ. ಪ್ರಸ್ತುತ ಮುಂಬಡ್ತಿಯನ್ನು ಸಹೋದ್ಯೋಗಿ ಎಸ್ ಬಿ ಭಟ್ಟಾಚಾರ್ಜೀ ನ್ಯಾಯಾಲಯದಲಲಿ ಪ್ರಶ್ನಿಸಿದ್ದರು.
ಆದರೆ ಸರ್ಕಾರಿ ನೌಕರರ ಭಡ್ತಿಯ ವೇಳೆ ಮೂಲಭೂತ ಹಕ್ಕುಗಳನ್ನೂ ಪರಿಗಣಿಸಬೇಕು ಎಂಬುದಾಗಿ ತೀರ್ಪಿನಲ್ಲಿ ತಿಳಿಸಿದೆ. ಅರ್ಹತೆಯಿಲ್ಲದ ವ್ಯಕ್ತಿ ಮುಂಬಡ್ತಿ ಪಡೆಯಲು ಹಕ್ಕುಗಳು ನೆರವಾಗುವುದಿಲ್ಲ ಎಂಬುದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ತಾತ್ಪರ್ಯ.
ದೇಶದ ಸಂವಿಧಾನದ 16ನೇ ವಿಧಿಯಂತೆ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿ ಬಡ್ತಿ ಪಡೆಯುವುದು ಮೂಲಭೂತ ಹಕ್ಕಲ್ಲ, ಆದರೆ ಬಡ್ತಿಗಾಗಿ ಪರಿಗಣಿಸಲು ಮೂಲಭೂತಹಕ್ಕುಗಳನ್ನು ಬಳಸಬಹದು ಎಂದು ನ್ಯಾಯಮೂರ್ತಿ ಎಸ್ ಬಿ ಸಿನ್ಹ ಹಾಗೂ ಸಿ ಕೆ ತಕ್ಕರ್ ಇವರನ್ನೊಳಗೊಂಡ ನ್ಯಾಯಪೀಠವು ತಿಳಿಸಿದೆ.
ಪ್ರಸ್ತುತ ನಿರ್ಧಿಷ್ಟ ಸಾಂವಿಧಾನಿಕ ವಿಧಿಯಂತೆ ಸರ್ಕಾರಿ ನೌಕರಿಗಾಗಿ ಪರಿಗಣಿಸಲ್ಪಡುವುದು ಪ್ರತಿಯೊಬ್ಬ ನೌಕರನ ಮೂಲಭೂತ ಹಕ್ಕು ಎನ್ನುತ್ತದೆ. ಮಿಜೋರಾಂ ಸರ್ಕಾರವು ಮಜೂಂದಾರ್ ಅವರಿಗೆ ಕಾರ್ಯನರ್ವಾಹಕ ಇಂಜಿನಿಯರ್ ಆಗಿ ಮುಂಬಡ್ತಿ ನೀಡುವ ವೇಳೆ ಸಹೋದ್ಯೋಗಿ ಎಸ್ ಬಿ ಭಟ್ಟಾಚಾರ್ಜೀ ಅವರಿಗಿಂತ ಹೆಚ್ಚಿನ ಎಸಿಆರ್ (ವಾರ್ಷಿಕ ರಹಸ್ಯ ದಾಖಲೆ) ಶ್ರೇಯಾಂಕ ವಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ.
|