ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಗುಜ್ಜಾರ ಪ್ರಕರಣ- ಇಂದು ದೆಹಲಿ ಬಂದ್‌
webdunia
violence
PTI
ರಾಜಸ್ಥಾನದಲ್ಲಿ ಅಶಾಂತಿಗೆ ಕಾರಣವಾಗಿರುವ ಗುಜ್ಜಾರ ಸಮುದಾಯದವರ ಮೀಸಲಾತಿ ಬೇಡಿಕೆ ಪ್ರತಿಭಟನೆ , ಮೀನಾ ಸಮುದಾಯದ ಘರ್ಷಣೆ ಹಾಗೂ ಅನುಬಂಧಿತ ಪ್ರಕರಣಗಳು ಮುಂದುವರಿದಿರುವಂತೆಯೇ ಸೋಮವಾರದಂದು ದೆಹಲಿ ಬಂದ್‌ಗೆ ಕರೆ ನೀಡಲಾಗಿದೆ.

ಗುಜ್ಜಾರ ಸಮುದಾಯದವರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರ ಅಂಗವಾಗಿ ದೇಶದ ರಾಜದಾನಿ ನವದೆಹಲಿಯನ್ನುಅಕ್ಷರಶಃ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ರಾಜಧಾನಿಗೆ ಒಳಬರುವ ಹಾಗೂ ಹೊರಹೋಗುವ ಮಾರ್ಗಗಗಳನ್ನು ತಡೆಯುವುದಾಗಿ ಗುಜ್ಜಾರರು ತಿಳಿಸಿದ್ದಾರೆ.

ಗುಜ್ಜಾರರ ಬಂದ್‌ ಕರೆ ಹಾಗೂ ಸಮುದಾಯ ಸಂಘರ್ಷ, ಹಿಂಸಾಚಾರ ಇತ್ಯಾದಿಗಳನ್ನು ಅನುಲಕ್ಷ್ಯಿಸಿ ಬಂದೋಬಸ್ತ್‌ ಬಿಗುಗೊಳಿಸಲಾಗಿದೆ. ಸ್ಥಳೀಯಪೊಲೀಸರು, ಅರೆಮಿಲಿಟರಿ ಪಡೆಗಳು,ಶಸ್ತ್ರಸಜ್ಜಿತ ಪಹರೆಗಾರರನ್ನು ನೇಮಿಸಲಾಗಿದೆ.

ಘರ್ಷಣೆಯಲ್ಲಿರುವ ಮೀನಾ ಸಮುದಾಯ ಹಾಗೂ ಗುಜ್ಜಾರ ಸಮುದಾಯದವರ ವೈರತ್ವ, ಪ್ರಕೋಪಕ್ಕೆ ತಿರುಗಿರುವ ಮೀಸಲಾತಿ ಪ್ರತಿಭಟನೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಗುಜ್ಜಾರರು ಇದೀಗ ಕಾಂಗ್ರೆಸ್ ಪಾಳೆಯದಿಂದ ಬಿಜೆಪಿಯತ್ತ ತಿರುಗುತ್ತಿದ್ದು, ಸಾಂತ್ವನ ಮಾತುಕತೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್‌ ಸಿಂಗ್‌ನ್ನು ಇಂದು ಭೇಟಿ ಮಾಡುವರು.

ತನ್ಮಧ್ಯೆ , ಭಾನುವಾರದಂದು ಗುಜ್ಜಾರ ಸಂಘರ್ಷ ಸಮಿತಿ ಮುಖಂಡ ಕರ್ನಲ್‌ ಕಿರೋರಿ ಸಿಂಗ್‌ರೊಂದಿಗೆ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ನಡೆಸಿದ ಪ್ರಥಮ ಮಾತುಕತೆ ಹಾಗೂ ಒಟ್ಟು ಆರನೇ ಸುತ್ತಿನ ಸಂಧಾನ ಮಾತುಕತೆಗಳು ವಿಫಲವಾಗಿವೆ.

ಗುಜ್ಜಾರರು ಹಾಗೂ ಮೀನಾ ಸಮುದಾಯದವರ ಘರ್ಷಣೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ರಾಜಸ್ತಾನದಲ್ಲಿ ಶಾಂತಿ ಪುನಃಸ್ಥಾಪಿಸಲು ಸರ್ಕಾರ ಇಂದು ಸಮುದಾಯನಾಯಕರೊಂದಿಗೆ ಮತ್ತೊಂದು ಸುತ್ತು ಮಾತುಕತೆ ನಡೆಸಲಿದೆ.

ಮುಖ್ಯಮಂತರಿ ವಸುಂಧರಾ ರಾಜೆ ಅವರು ಈಗಾಗಲೇ ಐದು ಸುತ್ತಿನ ಮಾತುಕತೆ ನಡೆಸಿದ್ದು, ಭಾನುವಾರದಂದು ಗುಜ್ಜಾರ ಸಂಘರ್ಷ ಸಮಿತಿ ಮುಖಂಡ ಕರ್ನಲ್‌ ಕಿರೋರಿ ಸಿಂಗ್‌ನಲ್ಲಿ ಮಾತುಕತೆ ನಡೆಸಲಾಗಿತ್ತು,ಈ ವರೆಗಿನ ಘರ್ಷಣೆಗಳಲ್ಲಿ ಮೃತರಾದವರ ಶವಗಳ ಅಂತ್ಯಕ್ರಿಯೆ ಭಾನುವಾರ ನಡೆದಿದೆ.
ಮತ್ತಷ್ಟು
ಸರ್ಕಾರಿ ನೌಕರರಿಗೆ ಮುಂಬಡ್ತಿ ಮೂಲಭೂತ ಹಕ್ಕಲ್ಲ
ಜಮ್ಮು:ಪೊಲೀಸ್‌ ಲಷ್ಕರ್‌ ಕಾಳಗ - ನಾಲ್ಕು ಸಾವು
ರಾಜಸ್ತಾನ ಹಿಂಸೆ- ಸೇನೆ ವೈಮಾನಿಕ ಸಮೀಕ್ಷೆ
ಗುಜ್ಜಾರರೊಂದಿಗೆ ಮುಖ್ಯಮಂತ್ರಿ ಸಂಧಾನ
ಗೋವಾ ಚುನಾವಣೆ- ಮತದಾನ ಆರಂಭ
ರಾಷ್ಟ್ರಪತಿಯಿಂದ 'ಬಾಲಶ್ರೀ' ಪ್ರಶಸ್ತಿ ಪ್ರದಾನ