ಪ್ರೀತಿಯ ಓದುಗರೇ,
ಇದೋ ಬಂದಿದೆ ವೆಬ್‌ದುನಿಯಾದಿಂದ ಹೊಚ್ಚ ಹೊಸ ಕನ್ನಡ ಪೋರ್ಟಲ್ - ವೆಬ್ ವಿಶ್ವ!
ವೆಬ್‌ದುನಿಯಾ ತಂಡದ ಸುದೀರ್ಘ ಪ್ರಯತ್ನ ಮತ್ತು ಪರಿಶ್ರಮದ ಫಲವಾಗಿ ವೆಬ್‌ದುನಿಯಾ ಕನ್ನಡ ಪೋರ್ಟಲ್ ನಿಮ್ಮ ಮುಂದಿದೆ.
ಯುನಿಕೋಡ್ ಫಾಂಟ್‌ನಲ್ಲಿ ಪೋರ್ಟಲ್ ಒಂದು ಪೂರ್ಣಪ್ರಮಾಣದಲ್ಲಿ ಹೊರಬರುತ್ತಿರುವುದು ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ ಮನಸ್ಸುಗಳಿಗೆ, ಬದಲಾವಣೆಗೆ ಸದಾ ತುಡಿಯುವ ಕನ್ನಡ ಕುಲಕೋಟಿಗೆ ಆತ್ಮೀಯವಾಗಬಹುದು ಎಂಬ ಆಶಯ ನಮ್ಮದು.
ಅಂತೆಯೇ, ಈ ಪೋರ್ಟಲ್‌ನ ವಿನ್ಯಾಸ, ಇ-ಮೇಲ್ ಸೇವೆ, ಫೋಟೋ ಗ್ಯಾಲರಿ ಮತ್ತು ಶುಭಾಶಯ ಪತ್ರ ಮುಂತಾದ ವಿಶೇಷತೆಗಳು ನಿಮಗೆ ಇಷ್ಟವಾಗಬಹುದೆಂಬ ನಂಬಿಕೆ ನಮ್ಮದು. ಮೊದಲ ಹಂತದಲ್ಲಿ ಪೋರ್ಟಲ್ ಆರಂಭಿಸಲಾಗಿದ್ದು, ಅವಶ್ಯಕತೆ ಮತ್ತು ಬೇಡಿಕೆಗಳಿಗೆ ಹೊಂದಿಕೊಂಡು ವೆಬ್‌ದುನಿಯಾದಲ್ಲಿ ಪ್ರಗತಿ ಕಾರ್ಯವು ನಿರಂತರ ಜಾರಿಯಲ್ಲಿರುತ್ತದೆ ಎಂಬ ಭರವಸೆಯೊಂದಿಗೆ ಈ ಕೂಸನ್ನು ನಿಮ್ಮ ಮಡಿಲಿಗೆ ಇರಿಸುತ್ತಿದ್ದೇವೆ.
ಇಲ್ಲಿ ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ, ವೆಬ್‌ದುನಿಯಾದ ಭಾಷಾ ಕುಟುಂಬದಲ್ಲಿ ಮಹತ್ವಪೂರ್ಣ ಬೆಳವಣಿಗೆಯಾಗಿದೆ. ಈಗಾಗಲೇ ಇರುವ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷಾ ಪೋರ್ಟಲ್‌ಗಳ ಜೊತೆಗೆ ಕನ್ನಡ, ಮರಾಠಿ, ಗುಜರಾತಿ, ಪಂಜಾಬಿ ಮತ್ತು ಬಂಗಾಳಿ ಎಂಬ ಹೊಸ ಭಾಷೆಗಳಲ್ಲೂ ಪೋರ್ಟಲ್‌ಗಳು ಹೊರಬರುತ್ತಿವೆ. ಅಂದರೆ ಇದುವರೆಗೆ 4 ಭಾಷೆಗಳಲ್ಲಿದ್ದ ವೆಬ್‌ದುನಿಯಾ, ಈಗ 9 ಭಾರತೀಯ ಭಾಷೆಗಳಲ್ಲಿ ಓದುಗರ ಸುದ್ದಿಯ ಹಸಿವು ನೀಗಲಿದೆ.
ವೆಬ್‌ದುನಿಯಾ ತನ್ನ ಓದುಗರಿಗೆ ಪ್ರತಿನಿತ್ಯ ಹೊಸ ವಿಷಯವಸ್ತುಗಳು ಮತ್ತು ಪೋರ್ಟಲ್‌ನೊಂದಿಗೆ ಹೊಂದಿಕೊಂಡಂತಿರುವ ಅತ್ಯಾಧುನಿಕ ಪ್ರಯೋಜನಗಳನ್ನು ಒದಗಿಸುವಲ್ಲಿ ಬದ್ಧವಾಗಿದ್ದು, ವೆಬ್‌ದುನಿಯಾದ ಈ ಹೊಸ ಪ್ರಯತ್ನ ನಿಮಗೆ ಆತ್ಮೀಯವಾಗಬಹುದು ಮತ್ತು ನಿಮ್ಮ ಪ್ರೀತಿಯಿಂದಲೇ ಯಶಸ್ಸು ಸಾಧಿಸಬಹುದು ಎಂಬ ವಿಶ್ವಾಸ ನಮ್ಮದು.
ನವೀನ ವಿನ್ಯಾಸ, ಹೊಸತನದೊಂದಿಗೆ ಹೊರಬಂದಿರುವ ಈ ಪೋರ್ಟಲ್ ಕುರಿತು ನಿಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳಿಗೆ ಸದಾ ಸ್ವಾಗತವಿದೆ. ನಿಮ್ಮ ಸಲಹೆ ಸೂಚನೆಗಳೇ ವೆಬ್‌ದುನಿಯಾದ ಸುಧಾರಣೆಗಳಿಗೆ ದಾರಿದೀಪವಾಗಲಿದೆ...
ನಿಮ್ಮ ಶುಭಾಕಾಂಕ್ಷೆಗಳು, ಸಲಹೆ ಸೂಚನೆಗಳ ನಿರೀಕ್ಷೆಯಲ್ಲಿ...
-ಸಂಪಾದಕ
|