ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಎಐಎಡಿಎಂಕೆ ಕಟ್ಟಡ ಧ್ವಂಸಕ್ಕೆ ನೋಟಿಸ್
webdunia
Ms Jayalalitha
WD
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಮಾಡಿರುವ ಆರೋಪ ನಿರಾಧಾರ ಎಂದು ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿರುವ ಎಐಎಡಿಎಂಕೆ ಮಖ್ಯಸ್ಥೆ ಜೆ.ಜಯಲಲಿತಾ ಅವರ ಎಐಎಡಿಎಂಕೆ ಕೇಂದ್ರ ಕಚೇರಿ ಧ್ವಂಸ ಮಾಡಲು ಡಿಎಂಕೆ ಸರಕಾರ ನೋಟಿಸ್ ಜಾರಿ ಮಾಡಿತ್ತು.ಈ ಕುರಿತು ಕೇಂದ್ರ ಕಚೇರಿಗೆ ಪತ್ರವನ್ನು ವಿಲೇವಾರಿ ಮಾಡಲಾಗಿದೆ .ಈ ನೋಟಿಸನ್ನು ಎಂ.ಕರುಣಾನಿಧಿ ಅವರ ಪ್ರಚೋದನೆಯಿಂದ ನೀಡಲಾಗಿದೆ ಎಂದು ಆರೋಪಿಸಿದ್ದರು.

ಆದರೆ ಕರುಣಾನಿಧಿಯವರು ಈ ಆರೋಪವನ್ನು ನಿರಾಕರಿಸಿ,ಇದರಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲ ಎಂದಿದ್ದಾರೆ.ಅಲ್ಲದೆ ಈಗಾಗಲೇ ಎಐಎಡಿಎಂಕೆ ಸೇರಿದಂತೆ ಸುಮಾರು 30 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ಬೇರೆನೂ ನನಗೆ ಗೊತ್ತಿಲ್ಲ.ಎಐಎಡಿಎಂಕೆ ಸೇರಿದಂತೆ ಸುಮಾರು 30 ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು.ಇಲ್ಲಿ ಮುಖ್ಯ ಸಮಸ್ಯೆ ಇರುವುದು ವಾಯ್‌ಲೇಟರ್ ಮತ್ತು ನ್ಯಾಯಾಲಯದ ಮಧ್ಯೆ.ಆ ನಿಟ್ಟಿನಲ್ಲಿ ನಾವು ಸುಮಾರು ಸಾವಿರಾರು ಕಟ್ಟಡಗಳನ್ನು ಉಳಿಸುವ ಪ್ರಯತ್ನ ಮಾಡಿರುವುದಾಗಿ ಅವರು ತಿಳಿಸಿದರು.

ಮದ್ರಾಸ್ ಉಚ್ಛನ್ಯಾಯಾಲಯದ ನಿರ್ದೇಶನದ ಮೇರೆಗೆ ಸಮಿತಿ ಅಕ್ರಮ ಕಟ್ಟಡಗಳ ತೆರವಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು
ನಿಮ್ಮ ಶುಭಾಶೀರ್ವಾದ ಮತ್ತು ಸಹಕಾರದ ನಿರೀಕ್ಷೆಯಲ್ಲಿ...
ಜಮ್ಮು ಬೆಟ್ಟದಲ್ಲಿ ಅವಿತಿದ್ದ ಭಯೋತ್ಪಾದಕ ಹತ
ಗುಜ್ಜಾರ ಪ್ರಕರಣ- ಇಂದು ದೆಹಲಿ ಬಂದ್‌
ಸರ್ಕಾರಿ ನೌಕರರಿಗೆ ಮುಂಬಡ್ತಿ ಮೂಲಭೂತ ಹಕ್ಕಲ್ಲ
ಜಮ್ಮು:ಪೊಲೀಸ್‌ ಲಷ್ಕರ್‌ ಕಾಳಗ - ನಾಲ್ಕು ಸಾವು
ರಾಜಸ್ತಾನ ಹಿಂಸೆ- ಸೇನೆ ವೈಮಾನಿಕ ಸಮೀಕ್ಷೆ