ದೇಶದ ಗಮ ಸೆಳೆದಿರುವ ಪ್ರವಾಸಿಗಳ ಸ್ವರ್ಗ ಗೋವಾ ಇದೀಗ ರಾಜಕೀಯ ಧ್ರುವೀಕರಣ ಕೇಂದ್ರವಾಗಿದೆ. ರಾಜ್ಯದ 40 ವಿಧಾನ ಸಭಾ ಸ್ಥಾನಗಳಿಗಾಗಿ ಜರುಗಿದ ಮತದಾನದ ಫಲಿತಾಂಶಕ್ಕಾಗಿ ಎಣಿಕೆ ಇಂದೀಗ ನಡೆಯುತ್ತಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನೇರ ಹಣಾಹಣಿಯ ನಡುವೆ , ಜನತಾದಳವೂ ಪ್ರಬಲಸ್ಪರ್ಧೆ ನೀಡಿದೆ. ಮಹಾರಾಷ್ಟ್ರವಾಗಿ ಗೋಮಾಂತಕ ಪಕ್ಷ, ಸೇವ್‌ಗೋವಾ ಮುಂತಾದ ಸ್ಥಳೀಯ ಪಕ್ಷಗಳೊಂದಿಗೆ ಸಿಪಿಐಎಂ ಕೂಡ ಅದೃಷ್ಟ ಪರೀಕ್ಷಿಸುತ್ತಿದೆ.
ಆಡಳಿತಾರೂಢ ಪಕ್ಷದ ಪ್ರತಾಪ ಸಿಂಹ ರಾಣೆ ಹಾಗೂ ವಿಪಕ್ಷ ಮುಖಂಡ ಮನೋಹರ ಪಾರಿಕಕ್ಕಾರ್ ಇವರ ನೇರ ಹಣಾಹಣಿಯಾಗಿದ್ದರೂ, ಇತರ ಅಭಿರ್ಥಿಗಳನ್ನೂ ನಿರ್ಲಕ್ಷಿಸುವಂತಿಲ್ಲ. ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಇದು ಅಸ್ತಿತ್ವದ ಪ್ರಶ್ನೆಯಾಗಿದ್ದರೆ, ಬಿಜೆಪಿಗೆ ಇದು ಅದೃಷ್ಟ ಪರೀಕ್ಷೆಯ ಕಣವಾಗಿದೆ.
ಗೋವಾದಲ್ಲಿ ಇಂದು ಸಂಜೆಯ ವೇಳೆಗೆ ವಿಜೇತರ ವಿವರದೊಂದಿಗೆ ಸರ್ಕಾರ ನಡೆಸುವ ಪಕ್ಷಗಳ ಬಲಾಬಲ ಸಮಗ್ರ ಚಿತ್ರಣ ದೊರೆಯಲಿದೆ. ಪ್ರಮುಖರ ಹಣೆಬರಹ ಮಧ್ಯಾಹ್ನದ ವೇಳೆಗೆ ಲಭಿಸಲಿದೆ.
|