ಗೋವಾರಾಜ್ಯದ 40 ವಿಧಾನ ಸಭಾ ಸ್ಥಾನಗಳಿಗಾಗಿ ನಡೆದ ಮತದಾನದ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮಧ್ಯಾಹ್ನ 12.30ರ ವರೆಗಿನ ಮಾಹಿತಿಯಂತೆ ಕಾಂಗ್ರೆಸ್ ಎನ್‌ಸಿಪಿ ಕೂಟ ಮುನ್ನಡೆಯಲ್ಲಿದೆ, ಬಿಜೆಪಿ ಪ್ರಬಲ ಸ್ಪರ್ಧೆಯಲ್ಲಿದೆ. ಇತರ ಪಕ್ಷಗಳ ಲೆಕ್ಕಾಚಾರವೂ ಗಮನಾರ್ಹವಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನೇರ ಹಣಾಹಣಿ ಮತ ಎಣಿಕೆಯ ಪ್ರಗತಿಯಲ್ಲಿ ಪ್ರಕಟವಾಗಿದೆ. ಲಭ್ಯ ಫಲಿತಾಂಶದಂತೆ ಸುಮಾರು 21 ಮತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿಯನ್ನು ಹಿಂದೆ ತಳ್ಳಿದೆ.
ವಿಜೇತ ಪ್ರಮುಖರ ಪಟ್ಟಿಯಲ್ಲಿ ಮುಖ್ಯಮಂತ್ರಿ ಪ್ರತಾಪ ಸಿಂಹ ರಾಣೆ, ಮಾಜಿ ಮುಖ್ಯಮಂತ್ರಿ ಬಿಜೆಪಿಯ ಮನೋಹರ ಪಾರಿಕ್ಕಾರ್, ಜಿಪಿಸಿಸಿ ಅಧ್ಯಕ್ಷ ರವಿ ನಾಯಕ್, ಹಾಲಿ ಸರ್ಕಾರದ ಸಚಿವರುಗಳಾದ ದಿಗಂಬರ್, ಕೃಷಿ ಸಚಿವ ಫ್ರಾನ್ಸಿಸ್ಕೋ ಪಾಶಿಯೋ ಎನ್‌ಸಿಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ 14, ಬಿಜೆಪಿ 12 ಸ್ತಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಫಲಿತಾಂಶ ಪ್ರಕಟವಾದ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ 12 ಬಿಜೆಪಿ 6 , ಉಳಿದವರು ಗೆಲುವು ಸಾಧಿಸಿದ್ದಾರೆ, ಪ್ರಾದೇಶಿಕ ಪಕ್ಷಗಳು ಹಾಗೂ ಜನತಾದಳವೂ ಪ್ರಬಲಸ್ಪರ್ಧೆ ನೀಡಿದೆ. ಮಹಾರಾಷ್ಟ್ರವಾಗಿ ಗೋಮಾಂತಕ ಪಕ್ಷ, ಸೇವ್‌ಗೋವಾ ಮುಂತಾದ ಸ್ಥಳೀಯ ಪಕ್ಷಗಳೊಂದಿಗೆ ಸಿಪಿಐಎಂ ಕೂಡ ಅದೃಷ್ಟ ಪರೀಕ್ಷಿಸುತ್ತಿದೆ.
ಕೆಲವೇ ಗಂಟೆಗಳಲ್ಲಿ ವಿಜೇತರ ಅಧಿಕೃತ ವಿವರ ಲಭಿಸಬಹುದಾಗಿದೆ. ಇಂದು ಸಂಜೆಯ ವೇಳೆಗೆ ಸರ್ಕಾರ ರಚಿಸುವವರ ಸ್ಪಷ್ಟ ಚಿತ್ರಣ ಲಭಿಸಲಿದೆ.
|