ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಗೋವಾದಲ್ಲಿ ಸರ್ಕಾರರಚಿಸಲು ಕಾಂಗ್ರೆಸ್‌ ಸಿದ್ಧತೆ
webdunia
ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರುವ ಗೋವಾದಲ್ಲಿ ಅರ್ಧಾಂಶದಷ್ಟು ವಿಧಾನ ಸಭಾಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌ ಏನ್‌ಸಿಪಿ ಮಿತ್ರಕೂಟ ಇಂದು ಅಥವಾ ನಾಳೆ ಹೊಸ ಸರ್ಕಾರ ರಚನೆಗಾಗಿ ಸಿದ್ಧವಾಗಲಿದೆ.

ಮಿತ್ರಕೂಟದಲ್ಲಿ ಕಾಂಗ್ರೆಸ್‌ಗೆ 16 ಸ್ಥಾನ ಹಾಗೂ ಸಹಪಕ್ಷ ಎನ್‌ಸಿಪಿ 3 ಸ್ಥಾನಗಳನ್ನು ಹೊಂದಿದೆ. ಗೋವಾ ವಿಧಾನ ಸಭೆಯ 40 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶದಂತೆ ಇದೀಗ ಕಾಂಗ್ರೆಸ್‌ಕೂಟ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಉಳಿದಂತೆ ಬಿಜೆಪಿ 14 ಸ್ಥಾನಗಳನ್ನು ಪಡೆದಿದ್ದರೆ, ಇತರರು 7 ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸ್‌ ಸರ್ಕಾರ ರಚನೆಗೆ ಅರ್ಹತೆ ಪಡೆದಿದೆ. ಆದಾಗ್ಯೂ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿರಬೇಕೆಂದಾದರೆ 40ರಲ್ಲಿ 21 ಸ್ಥಾನಗಳ ಅಗತ್ಯವಿದೆ.

ಅದೇನಿದ್ದರೂ ಇಂದು ತಡವೇಳೆ ಅಥವಾ ನಾಳೆಯೊಳಗಾಗಿ ಕಾಂಗ್ರೆಸ್‌ ನೇತೃತ್ವದಲ್ಲಿ ಗೋವಾದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಕಾಂಗ್ರೆಸ್‌ ಸಂಸದ ಶಾಂತಾರಾಮ್‌ ನಾಯಕ್‌ ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ವಿಜೇತರಾದ ವಿಶ್ವಜೀತ್‌ ರಾಣೆ ಹಾಗೂ ಅನಿಲ್‌ ಸಲ್ಗಾಂವ್ಕರ್‌ ಇವರ ಬೆಂಬಲ ಪಡೆಯಲಾಗುವುದು ಎಂದವರು ತಿಳಿಸಿದ್ದಾರೆ.
ಮತ್ತಷ್ಟು
ಗಲಭೆ- ಮೂರು ರಾಜ್ಯಗಳಿಗೆ ನೊಟೀಸ್‌
ಗೋವಾದಲ್ಲಿ ಕಾಂಗ್ರೆಸ್‌ಗೆ ವರ್ಣರಂಜಿತ ಗೆಲುವು
ಗೋವಾ- ಕಾಂಗ್ರೆಸ್‌ ಮುನ್ನಡೆ, ಬಿಜೆಪಿ ಪ್ರಬಲ ಸ್ಪರ್ಧೆ
ಗೋವಾ- ಮತ ಎಣಿಕೆ ಆರಂಭ
ಎಐಎಡಿಎಂಕೆ ಕಟ್ಟಡ ಧ್ವಂಸಕ್ಕೆ ನೋಟಿಸ್
ನಿಮ್ಮ ಶುಭಾಶೀರ್ವಾದ ಮತ್ತು ಸಹಕಾರದ ನಿರೀಕ್ಷೆಯಲ್ಲಿ...