ಭಾರತದಲ್ಲಿ ಪ್ರವಾಸಿಗಳ ಸ್ವರ್ಗ ಎಂದು ಭಾವಿಸಲಾಗಿರುವ ಗೋವಾರಾಜ್ಯಾಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮೈತ್ರಿಕೂಟ ಕ್ಷಣಗಣನೆಯಲ್ಲಿರುವಂತೆಯೇ, ಮಿತ್ರಪಕ್ಷ ಎನ್‌ಸಿಪಿ ಉಪಮುಖ್ಯಮಂತ್ರಿ ಸ್ಥಾನದತ್ತ ದೃಷ್ಟಿನೆಟ್ಟಿದೆ.
ನಲುವತ್ತು ಸದಸ್ಯರಿರುವ ಗೋವಾ ವಿಧಾನಸಭೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಮಿತ್ರಕೂಟವು 19 ಸ್ಥಾನ(ಕನಿಷ್ಠ ಬಹುಮತಕ್ಕೆ 2 ಕಡಿಮೆ)ಗಳನ್ನು ಪಡೆದು ಅತಿದೊಡ್ಡ ವಿಜೇತ ಪಕ್ಷವಾಗಿ ಹೊರಹೊಮ್ಮಿದೆ.
ಈ ಹಂತದಲ್ಲಿ ಹೊಸ ಸರ್ಕಾರ ರಚನೆಗಾಗಿ ಕಾಂಗ್ರೆಸ್ ತನ್ನ ಹಕ್ಕು ಸ್ಥಾಪನೆಯೊಂದಿಗೆ ಸಿದ್ಧತೆ ಆರಂಭಿಸಿದೆ. ಪಕ್ಷದಿಂದ ಹಾಲಿ ಮುಖ್ಯಮಂತ್ರಿಯಾಗಿದ್ದ ಪ್ರತಾಪ ಸಿಂಹ ರಾಣೆ ಮತ್ತೆ ಗದ್ದುಗೆ ಏರುವುದು ಖಚಿತ. ಆದರೆ ಉಪಮುಖ್ಯಮಂತ್ರಿಯಾಗಲು ಎನ್‌ಸಿಪಿ ಸಿದ್ಧತೆ ನಡೆಸಿದೆ.
ಕಾಂಗ್ರೆಸ್‌ಮಿತ್ರ ಪಕ್ಷವು ತಮ್ಮಲ್ಲಿ ಕಡಿಮೆಯಾಗಿರುವ ಎರಡು ಸ್ಥಾನಗಳನ್ನು ಪಡೆಯಲು ಪಕ್ಷೇತರ ಶಾಸಕರ ಬೆಂಬಲ ಪಡೆಯುವುದು ಸಹ ಖಚಿತವಾಗಿದೆ. ಕಾಂಗ್ರೆಸ್ ನೊಂದಿಗೆ ಅಧಿಕಾರ ಹಂಚಿಕೆಯಲ್ಲೂ ಎನ್‌ಸಿಪಿ ಪಾಲುದಾರಿಕೆ ವಹಿಸಿಕೊಳ್ಳುತ್ತಿರುವುದು ಮಹತ್ವವಾಗಿದೆ.
|