ಜಾಗತಿಕ ಸಮಸ್ಯೆಯಾಗಿರುವ ಹವಾಮಾನ ವೈಪರೀತ್ಯವನ್ನೆದುರಿಸಲು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಜೊತೆಗೂಡಿ ಹೊಣೆವಹಿಸುವ ಅಗತ್ಯವಿದೆ. ಈ ಕರಿತು ಹಿಂದುಳಿದ ರಾಷ್ಟ್ರಗಳ ಮೇಲೆ ಗೂಬೆಕೂರಿಸುವ ಪಾಶ್ಚಾತ್ಯ ರಾಷ್ಟ್ರಗಳ ನಿಲುವು ಸರಿಯಲ್ಲ ಎಂದು ದೇಶದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಜರ್ಮನಿಯಲ್ಲಿ ಜರುಗಲಿರುವ ಜಿ-8 ರಾಷ್ಟ್ರಗಳ ಪ್ರತಿನಿಧಿಗಳು ಸೇರುವ ಶೃಂಗ ಸಮ್ಮೇಳನದಲ್ಲಿ ಅವರು ಈ ಕುರಿತು ಪ್ರಮುಖ ವಿಷಯವಾಗಿ ಮಾತನಾಡುವರು ಎಂದು ಪ್ರಧಾನ ಮಂತ್ರಿಕಾರ್ಯಾಲಯದ ಮೂಲಗಳು ತಿಳಿಸಿವೆ.
ಬದಲಾಗುತ್ತಿರುವ ಜಾಗತಿಕ ಪರಿಸರದಲ್ಲಿ ಹವಾಮಾನ ವೈಪರೀತ್ಯದ ಹೊಣೆಗಾರಿಕೆಯ್ನು ಅಭಿವೃದ್ಧಿಹೊಂದಿದ ಹಾಗೂ ಪ್ರಗತಿಶೀಲ ರಾಷ್ಟರಗಳು ಸಮನಾಗಿ ಹಂಚಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ನಾಳೆಯಿಂದ ಜರ್ಮನಿಯಲ್ಲಿ ಜರುಗಲಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಾಲ್ಕುದಿನಗಳ ಅವಧಿಯ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಹಂತದಲ್ಲಿ , ಮಾಧಅಯಮ ಕಾರ್ಯಕರ್ತರಲ್ಲಿ ಮಾತನಾಡಿದ ಅವರು , ಅಭಿವೃದ್ಧಿ ಶೀಲ ರಾಷ್ಟ್ರಗಳ ಹವಾಮಾನ ಹಾಗೂ ಪರಿಸರ ರಕ್ಷಣೆಗೆ ಅಗತ್ಯ ಅಭಿವೃದ್ಧಿ ಕ್ರಮಗಳು ಆಗಬೇಕಿದೆ ಎಂದರು.
|