ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಸರಣಿ ಸ್ಫೋಟ 71 ಮಂದಿಯಲ್ಲಿ 42 ಮಂದಿಗೆ ಶಿಕ್ಷೆ
webdunia
ಹದಿನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಬಾಬಾ ಮೂಸಾಗೆ ಜೀವಾವಧಿ , ಇತರರಿಗೆ ದಂಡಸಹಿತ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿದೆ.

ಇಂದಿನ ತೀರ್ಪೂ ಸೇರಿದಂತೆ ಸರಮಿ ಸ್ಫೋಟಕ್ಕೆ ಸಂಬಂಧಿಸಿ ಇದುವರೆಗೆ 71 ಮಂದಿ ಶಿಕ್ಷೆ ವಿಧಿಸಲಾಗಿದೆ. ಆದರೆ ಇವರಲ್ಲಿ 29 ಮಂದಿಯ ಶಿಕ್ಷೆ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಆರೋಪಿ ಇಬ್ರಾಹಿಂ ಅಲಿಯಾಸ್‌ ಬಾಬಾ ಮೂಸಾ ಅಕ್ರಮವಾಗಿ ಎ.ಕೆ.-56ರೈಫಲ್‌ ಹಾಗೂ ಹ್ಯಾಂಡ್‌ ಗ್ರಾನೇಡ್‌ಗಳನ್ನು ಬಾಲಿವುಡ್‌ ನಟ ಸಂಜಯ್‌ದತ್‌ಗೆ ಮಾರಾಟ ಮಾಡಿದ್ದನು.

ಭೂಗತ ಲೋಕದ ಗ್ಯಾಂಗ್‌ಸ್ಟರ್‌ ಅಬೂಸಲೇಂ ಸಹವರ್ತಿಯಾಗಿದ್ದ ಇಬ್ರಾಹಿಂ ಸಂಜಯ್‌ದತ್‌ಗೆ ಆಯುಧ ಮದ್ದುಗುಂಡು ಗಳನ್ನು ಅಕ್ರಮ ಸರಬರಾಜು ಮಾಡಿದಂತೆಯೇ, ಈಗಾಗಲೇ ಆರೋಪ ಪಟ್ಟಿಯಲ್ಲಿರುವ ಮೃತ ಸಲೀಂ ಕುರ್ಲಾನಿಗೂ ಆಯುಧ ಪೂರೈಕೆ ಮಾಡಿರುವುದಾಗಿ ತಿಳಿದು ಬಂದಿದೆ.

ಇದಲ್ಲದೆ ಸ್ವತಃ ಎಕೆ-56 ಸುಧಾರಿತ ಬಂದೂಕು, 26 ಹ್ಯಾಂಡ್‌ ಗ್ರಾನೇಡ್‌ಗಳನ್ನು ವಶದಲ್ಲಿರಿಸಿದ್ದ, ಇವುಗಳೆಲ್ಲಾ ಸರಣಿ ಸ್ಫೋಟದ ಬಳಿಕ ಈತನಿಂದ ವಶವಾಗಿತ್ತು.

ಜೀವಾವಧಿ ಶಿಕ್ಷೆಗೀಡಾದ ಇನ್ನೋರ್ವ ಆರೋಪಿ ಎಂದರೆ ಸರ್ದಾರ್‌ ಸಾಹೇಬ್‌ ಆಲಿ ಖಾನ್. ಈತ ಸರಣಿ ಬಾಂಬ್‌ ಸ್ಫೋಟ ಸಂಚಿನಲ್ಲಿ ಪಾಲ್ಗೊಂಡಿದ್ದನಲ್ಲದೆ, ಆರ್‌ಡಿಎಕ್ಸ್ ಸ್ಫೋಟಕಗಳನ್ನು ವಾಹನಗಳಲ್ಲಿ ತುಂಬಿರಿಸಿದ ಆರೋಪ ಹೊಂದಿದ್ದನು.ಈ ತನಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸರಣಿ ಸ್ಫೋಟದ ರೂವಾರಿ ಟೈಗರ್‌ ಮೆಮೋನ್‌ನ ಸಹಚರ ಹವಾಲಾ ಹಣ ವ್ಯವಹಾರಸ್ಥ ಸೂಲ್‌ಚಂದ್‌ ಷಹಾಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮತ್ತಷ್ಟು
ಹವಾಮಾನ ವ್ಯತ್ಯಯಕ್ಕೆ ಎಲ್ಲರೂ ಹೊಣೆ- ಪ್ರಧಾನಿ
ಗೋವಾದಲ್ಲಿ ಡಿಸಿಎಂ ಪಟ್ಟದತ್ತ ಕಣ್ಣು
ದೇಶದಾದ್ಯಂತ ಕಾಂಗ್ರೆಸ್‌ ಗೆಲುವು
ಗೋವಾದಲ್ಲಿ ಸರ್ಕಾರರಚಿಸಲು ಕಾಂಗ್ರೆಸ್‌ ಸಿದ್ಧತೆ
ಗಲಭೆ- ಮೂರು ರಾಜ್ಯಗಳಿಗೆ ನೊಟೀಸ್‌
ಗೋವಾದಲ್ಲಿ ಕಾಂಗ್ರೆಸ್‌ಗೆ ವರ್ಣರಂಜಿತ ಗೆಲುವು