ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಗೋವಾ:ರಾಣೆ,ನಾಯ್ಕ್ ಇಂದು ಆಯ್ಕೆ
webdunia
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚುಸ್ಥಾನಗಳಿಸಿದ ಬಹುದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮುಂದಿನ ಸರ್ಕಾರ ರಚಿಸುವ ಸಿದ್ಧತೆಯಲ್ಲಿದ್ದು, ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ಶಾಸಕರು ಇಂದು ಅಪರಾಹ್ನ ಸಭೆ ಸೇರಲಿದ್ದಾರೆ.

ಮುಖ್ಯಮಂತ್ರಿ ಪದಕ್ಕಾಗಿ ಪ್ರಧಾನ ಅಭ್ಯರ್ಥಿಗಳಾದ ಹಾಲಿ ಮುಖ್ಯಮಂತ್ರಿ ಪ್ರತಾಪ ಸಿಂಹ ರಾಣೆ ಹಾಗೂ ಗೋವಾ ಕಾಂಗ್ರೆಸ್‌ ಮುಖ್ಯಸ್ಥ ರವಿ ನಾಯ್ಕ್‌ ಇವರಿಂದ ಆಯ್ಕೆ ನಡೆಯಲಿದ್ದು, ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪರವಾಗಿ ಪ್ರತಿನಿಧಿಗಳು ಭಾಗವಹಿಸುವರು.

ಕಾಂಗ್ರೆಸ್ ಶಾಸಕಾಂಗ ಪಕ್ಷ(ಸಿಎಲ್‌ಪಿ)ದ ನಿಯೋಗವೊಂದು ಜೂನ್‌ 5ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ , ಗೋವಾ ಶಾಸಕಾಂಗ ಪಕ್ಷದ ಮುಖಂಡ ಆಯ್ಕೆ ನಡೆಸುವ ಹೊಣೆಯನ್ನು ಅವರಿಗೆ ವಹಿಸಿದ್ದರು.

ರಾಜ್ಯದ ಪಕ್ಷ ಮುಖಂಡರಾದ ಶಾಂತಾರಾಮ ನಾಯ್ಕ ಅವರ ಹೇಳಿಕೆಯಂತೆ ಇಂದು ಅಪರಾಹ್ನದ ಸಭೆಗೆ ಕೇಂದ್ರ ಸರ್ಕಾರದ ಶಕ್ತಿಖಾತೆ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಅಖಿಲ ಭಾರ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಪಕ್ಷದ ಗೋವಾ ಉಸ್ತುವಾರಿ ಮಾರ್ಗರೆಟ್‌‍ ಆಳ್ವ, ಆರ್.ಕೆ. ಧವಾನ್‌ ಪಾಲ್ಗೊಳ್ಳುವರು ಎಂದಿದ್ದಾರೆ.
ಮತ್ತಷ್ಟು
ಸರಣಿ ಸ್ಫೋಟ 71 ಮಂದಿಯಲ್ಲಿ 42 ಮಂದಿಗೆ ಶಿಕ್ಷೆ
ಹವಾಮಾನ ವ್ಯತ್ಯಯಕ್ಕೆ ಎಲ್ಲರೂ ಹೊಣೆ- ಪ್ರಧಾನಿ
ಗೋವಾದಲ್ಲಿ ಡಿಸಿಎಂ ಪಟ್ಟದತ್ತ ಕಣ್ಣು
ದೇಶದಾದ್ಯಂತ ಕಾಂಗ್ರೆಸ್‌ ಗೆಲುವು
ಗೋವಾದಲ್ಲಿ ಸರ್ಕಾರರಚಿಸಲು ಕಾಂಗ್ರೆಸ್‌ ಸಿದ್ಧತೆ
ಗಲಭೆ- ಮೂರು ರಾಜ್ಯಗಳಿಗೆ ನೊಟೀಸ್‌