ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಷ್ಟ್ರೀಯ ತೃತೀಯ ರಂಗ ಉದಯ
webdunia
Jayalalitha
ND
ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಎಂಟು ಪ್ರಾದೇಶಿಕ ಪಕ್ಷಗಳ ಕೂಟವು ರಾಷ್ಟ್ರ ಮಟ್ಟದಲ್ಲಿ ತೃತೀಯರಂಗವೊಂದನ್ನು ರಚಿಸುವುದಾಗಿ ಘೋಷಿಸಿವೆ.

ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮೂರನೇ ರಂಗ ರಚನೆಯಾಗುತ್ತಿದೆ. ಆದರೆ ಹೆಸರು ಹಾಗೂ ಇತರ ವಿವರಗಳು ಇನ್ನೂ ಪ್ರಕಟಿಸಲಾಗಿಲ್ಲ.

ತೆಲಗುದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ಸಂಘಟಿಸಿದ್ದ ಸಭೆಯಲ್ಲಿ ಎಐಎಡಿಕೆ ನಾಯಕಿ ಜಯಲಲಿತಾ,ಮುಲಾಯಂ ಸಿಂಗ್ ಯಾದವ್,ಅಮರ್ ಸಿಂಗ್, ಬೃಂದಾವನ್ ಗೋ ಸ್ವಾಮಿ(ಅಸ್ಸೊಮ್ ಗಣ ಪರಿಷತ್) ಓಂ ಪ್ರಕಾಶ್ ಚೌತಾಲಾ (ಭಾರತೀಯ ರಾಷ್ಟ್ರೀಯ ಲೋಕದಳ )ಬಾಬುಲಾಲ್ ಮರಾಂಡಿ (ಜಾರ್ಖಂಡ್ ವಿಕಾಸ್ ಮೋರ್ಚಾ) ಹಾಗೂ ವೈಕೋ(ಎಂಡಿಎಂಕೆ) ಭಾಗವಹಿಸಿದ್ದರು. ಕೇರಳ ಕಾಂಗ್ರೆಸ್‌ನ ಕೆ.ಜೆ.ಥಾಮಸ್ ಈ ರಂಗವನ್ನು ಬೆಂಬಲಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರ ನಿವಾಸದಲ್ಲಿ ನಡೆದ ಪ್ರಾದೇಶಿಕ ಪಕ್ಷಗಳ ಸಭೆಯ ನಂತರ ಮಾಧಅಯಮಗಳಿಗೆ ಮಾತನಾಡಿ ತಮಿಳ್ನಾಡು ಮಾಜಿ ಮುಖ್ಯ ಮಂತ್ರಿ ಎಐಎಂಡಿಎಂಕೆ ನಾಯಕಿ ಜಯಲಲಿತಾ, ಪ್ರಸ್ತುತ ರಾಷ್ಟ್ರೀಯ ರಂಗ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ ಎಲ್ಲ ಜಾತ್ಯತೀತ ಪಕ್ಷಗಳಿಗೂ ತಮ್ಮ ರಂಗಕ್ಕೆ ಸ್ವಾಗತವಿದೆ ಎಂದರು.

ಸಂಯುಕ್ತ ರಂಗ ಹಾಗೂ ಎನ್‌ಡಿಎ ಸರಕಾರ ರಚನೆಯಲ್ಲಿ ಚಂದ್ರಬಾಬು ಪ್ರಮುಖ ಪಾತ್ರ ವಹಿಸಿದ್ದರು.ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಮತ್ತೊಮ್ಮೆ ಪ್ರಯತ್ನ ಆರಂಭಿಸಿದ್ದಾರೆ.ತೃತೀಯ ರಂಗ ಕುರಿತಂತೆ ಮುಂದಿನ ಸುತ್ತಿನ ಮಾತುಕತೆ ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಿದರು.
ಮತ್ತಷ್ಟು
ಗೋವಾ:ರಾಣೆ,ನಾಯ್ಕ್ ಇಂದು ಆಯ್ಕೆ
ಸರಣಿ ಸ್ಫೋಟ 71 ಮಂದಿಯಲ್ಲಿ 42 ಮಂದಿಗೆ ಶಿಕ್ಷೆ
ಹವಾಮಾನ ವ್ಯತ್ಯಯಕ್ಕೆ ಎಲ್ಲರೂ ಹೊಣೆ- ಪ್ರಧಾನಿ
ಗೋವಾದಲ್ಲಿ ಡಿಸಿಎಂ ಪಟ್ಟದತ್ತ ಕಣ್ಣು
ದೇಶದಾದ್ಯಂತ ಕಾಂಗ್ರೆಸ್‌ ಗೆಲುವು
ಗೋವಾದಲ್ಲಿ ಸರ್ಕಾರರಚಿಸಲು ಕಾಂಗ್ರೆಸ್‌ ಸಿದ್ಧತೆ