ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
'ಮೃತ' ತರುಣಿಯ ಅವಯವಗಳ ದಾನ!
webdunia
ಶೈಲಜಾ ಈಗ ಮೃತಪಟ್ಟಿದ್ದಾಳೆ..., ಆದರೂ ಬದುಕಿದ್ದಾಳೆ! ಲಕ್ವದಿಂದ ಮಿದುಳು ಮಾತ್ರ ಮೃತಪಟ್ಟ ಆಕೆಯ ಮೂತ್ರಪಿಂಡಗಳು, ಯಕೃತು, ಕಣ್ಣುಗಳು ದಾನವಾಗಿ ಇತರರ ದೇಹದಲ್ಲಿ ಸಜೀವವಾಗಿ ಮಿಡಿಯುತ್ತಿವೆ...!

ಮೃತ ವ್ಯಕ್ತಿಯ ಅಂಗಾಂಗಳು ಇತರರಿಗೆ ಕಸಿ ಮಾಡಲು ಅರ್ಹವಾಗುವಂತೆ ಜೀವಂತವಿರುವುದು. ಅವುಗಳನ್ನೆಲ್ಲಾ ಇತರರಿಗೆ ಯಶಸ್ವಿಯಾಗಿ ಕಸಿ ಮಾಡಿರುವುದು, ಇತ್ಯಾದಿ ವಿಸ್ಮಯಗಳನ್ನೊಳಗೊಂಡ ಈ ಪ್ರಕರಣ ದಕ್ಷಿಣ ಭಾರತದಲ್ಲೇ ಪ್ರಥಮ ಎನ್ನಲಾಗಿದೆ.

ಮಿದುಳು ಸ್ಥಗಿತೊಂಡು ನಿಶ್ಚೇಷ್ಟಿತ( ಕೊಮಾ)ಸ್ಥಿತಿಯಲ್ಲಿ ಇಲ್ಲಿನ ಕಾಮಿನೆನಿ ಅತ್ಯಾಧುನಿಕ ತಂತ್ರಜ್ಞಾನದ ಆಸ್ಪತ್ರೆಗೆ ದಾಖಲಾದ , ಇಪ್ಪತ್ತರ ಹರೆಯದ ಶೈಲಜಾಳ ಮಿದುಳು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. ಹೃದಯ ಮತ್ತಿತರ ಅಂಗಾಂಗಳು ಮಿಡಿಯುತ್ತಿದ್ದರೂ ಮಿದುಳು ನಿಷ್ಕ್ರಿಯವಾದರೆ ವ್ಯಕ್ತಿಯನ್ನು 'ಮೃತ' ಎಂದು ಘೊಷಿಸಲಾಗುತ್ತದೆ.

ಆದರೆ ಈ ಹಂತದಲ್ಲಿ ಗುರುತಿಸಲಾಗಿರುವ ಅಂಶವೆಂದರೆ ತಜ್ಞ ವೈದ್ಯಕೀಯ ನೆರವಿನ ಹೊರತಾಗಿಯೂ ಆಕೆಯನ್ನು ಪೂರ್ವಸ್ಥಿತಿಗೆ ತರುವುದುದು ಸಾಧ್ಯವಿಲ್ಲ. ಮಣ್ಣು ಸೇರುವ ಹಂತದಲ್ಲಿರುವ ಮಗಳ ದೇಹದ ಕೆಲವು ಭಾಗಗಳು ಇನ್ನೂ ಜೀವಂತವಿದೆ ಎಂದು ತಿಳಿದ ಮನೆ ಮಂದಿ ರೋಧಿಸಿದರು. ಆದರೂ ತಕ್ಷಣ ಜಾಗೃತರಾದರು!

ವೈದ್ಯರ ಸಲಹೆಯಂತೆ ಶೈಲಜಾಳ ಕಣ್ಣು, ಯಕೃತು, ಮೂತ್ರಪಿಂಡಗಳನ್ನು ಇತರ ರೋಗಿಗಳಿಗೆ ದಾನ ಮಾಡಲಾಯಿತು. ಆಸ್ಪತ್ರೆಯ ಅಂಗಾಂಗ ಕಸಿ ವಿಭಾಗದ ನಿರ್ವಾಹಕ ಬಿ ಎಸ್‌ ಸುಬ್ರಹ್ಮಣ್ಯಂ ದಕ್ಷಿಣ ಭಾರತದಲ್ಲಿ ಇಂತಹ ಪ್ರಕರಣ ಇದೇ ಮೊದಲು ಎಂದಿದ್ದಾರೆ.
ಮತ್ತಷ್ಟು
ಜಿ-8ಲ್ಲಿ ಪ್ರಧಾನಿ ಸಿಂಗ್ ಪ್ರತಿಪಾದನೆ
ಗೋವಾ:ರಾಣೆ,ನಾಯ್ಕ್ ಇಂದು ಆಯ್ಕೆ
ಸರಣಿ ಸ್ಫೋಟ 71 ಮಂದಿಯಲ್ಲಿ 42 ಮಂದಿಗೆ ಶಿಕ್ಷೆ
ಹವಾಮಾನ ವ್ಯತ್ಯಯಕ್ಕೆ ಎಲ್ಲರೂ ಹೊಣೆ- ಪ್ರಧಾನಿ
ಗೋವಾದಲ್ಲಿ ಡಿಸಿಎಂ ಪಟ್ಟದತ್ತ ಕಣ್ಣು
ದೇಶದಾದ್ಯಂತ ಕಾಂಗ್ರೆಸ್‌ ಗೆಲುವು