ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಷ್ಟ್ರಪತಿ ಹುದ್ದೆ ಕನ್ನಡಿಗ ಮೊಯ್ಲಿಗೆ ಒಲಿಯುವುದೇ?
webdunia
M Veerappa Moily
PTI
ರಾಷ್ಟ್ರಪತಿಯಾದ ವ್ಯಕ್ತಿ ತನ್ನ ಸಾಂವಿಧಾನಿಕ ಕಾರ್ಯಗಳತ್ತ ಗಮನ ನೀಡಬೇಕು. ಪ್ರಧಾನ ಮಂತ್ರಿಯನ್ನು ಅನುಕರಿಸಲು ಪ್ರಯತ್ನಿಸಬಾರದು, ಪ್ರಚಾರಾಸಕ್ತರೂ ಆಗಿರಬಾರದು ಹೀಗೆಂದವರು ಕನ್ನಡಿಗ, ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ, ದೇಶದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ನುಡಿದಿದ್ದಾರೆ.

ದಕ್ಷಿಣ ಭಾರತದಿಂದ ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಿಂದ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರಿದ್ದಾರೆ. ಆದರೆ, ಕನ್ನಡಿಗರಾರೂ ಈ ಹುದ್ದೆಗೆ ತಲುಪಿಲ್ಲ ಎಂಬ ವಾಸ್ತವಾಂಶದ ನಡುವೆ, ಅಭ್ಯರ್ಥಿ ಯಾದಿಯಲ್ಲಿರುವ ವೀರಪ್ಪ ಮೊಯ್ಲಿಯವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಪತಿ ಹುದ್ದೆಯನ್ನಲಂಕರಿಸುವವರು ತಮ್ಮ ಅಳತೆ ಮೀರಿ ಪ್ರಚಾರ ಪಡೆಯುತ್ತಿದ್ದಾರೇನೋ ಎನ್ನುವಂತೆ ಮೊಯ್ಲಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರಪತಿ ಪ್ರಧಾನ ಮಂತ್ರಿಗೆ ಸ್ಪರ್ಧಿಯಲ್ಲ, ನ್ಯಾಯಾಂಗ, ಕಾರ್ಯಾಂಗ ,ಶಾಸಕಾಂಗದ ಸಮನ್ವಯಕಾರನಾಗಿ ಅವರ ಸಾಂವಿಧಾನಿಕ ಅಧಿಕಾರವಿದೆ. ಈ ವಿಭಾಗಗಳಲ್ಲಿ ಸಮಸ್ಯೆಗಳು ಉದ್ಭವಿಸದಾಗ ರಾಷ್ಟ್ರಪತಿ ಹಸ್ತಕ್ಷೇಪ ಮಾಡಬೇಕು ಎಂಬುದು ಮೊಯ್ಲಿ ಹೇಳಿಕೆ.

ರಾಷ್ಟ್ರಪತಿಗಳಾದವರು ತಮಗೆ ಸಾಂವಿಧಾನಕವಾಗಿ ಮಹತ್ವದ ಕಾರ್ಯಗಳನ್ನು ನಿರ್ವಹಿಸಲು ಅವಕಾಶವಿದೆ ಎಂಬುದನ್ನು ಮರೆತಂತಿರುತ್ತಾರೆ. ಇಂತಹ ಕಾರ್ಯಗಳನ್ನು ಕೈಗೊಳ್ಳದೆ, ಪ್ರಧಾನಿ ಅಥವಾ ಅಂತಹ ಇತರರನ್ನು ಅನುಕರಿಸುವುದು ಸರಿಯಲ್ಲ ಎನ್ನುವುದು ಅವರ ಮಾತಿನ ಇಂಗಿತ.

ರಾಷ್ಟ್ರ ಪತಿ ಹುದ್ದೆ ಯಾರ ಔದಾರ್ಯವೂ ಅಲ್ಲ, ಆ ಹುದ್ದೆಯಲ್ಲಿ ಮೂಗು ತೂರಿಸಲು ಯಾರಿಗೂ ಅವಕಾಶ ನೀಡಬಾರದು ಎಂದಿರುವ ಮೊಯ್ಲಿ, ರಾಷ್ಟ್ರ ಪತಿ ಹುದ್ದೆಗಾಗಿರುವ ಚುನಾವಣೆ ಯಾರು ಯಾರೋ ಆಯ್ಕೆಯಾಗುವಂತಿರಬಾರದು, ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿದವರೇ ಸ್ಪರ್ಧಿಸುವಂತಿರಬೇಕು. ಸಾಮಾಜಿಕ ರಾಷ್ಟ್ರೀಯ ಹಂತದಿಂದ ಬೆಳೆದು ಬಂರುವಂತಿರಬೇಕು ಎಂದಿದ್ದಾರೆ.
ಮತ್ತಷ್ಟು
ಓಮಾನ್‌ ಗೊನು ತೂಫಾನ್- ದೆಹಲಿ ಕ್ರಮ
'ಮೃತ' ತರುಣಿಯ ಅವಯವಗಳ ದಾನ!
ರಾಷ್ಟ್ರೀಯ ತೃತೀಯ ರಂಗ ಉದಯ
ಗೋವಾ:ರಾಣೆ,ನಾಯ್ಕ್ ಇಂದು ಆಯ್ಕೆ
ಸರಣಿ ಸ್ಫೋಟ 71 ಮಂದಿಯಲ್ಲಿ 42 ಮಂದಿಗೆ ಶಿಕ್ಷೆ
ಹವಾಮಾನ ವ್ಯತ್ಯಯಕ್ಕೆ ಎಲ್ಲರೂ ಹೊಣೆ- ಪ್ರಧಾನಿ