ಕೊಲ್ಲಿ ರಾಷ್ಟ್ರ ಒಮಾನ್‌ಗೆ ಅಪ್ಪಳಿಸಿದ ಗೊನ್ ತೂಫಾನ್‌ನಲ್ಲಿ ಓರ್ವ ಭಾರತೀಯ ಮೃತ ಪಟ್ಟು ಇತರ 8 ಮಂದಿ ನಾಪತ್ತೆಯಾಗಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ದೃಢ ಪಡಿಸಿದೆ.
ಮೃತ ವ್ಯಕ್ತಿಯನ್ನು ಕೇರಳ ಮೂಲದ ಪ್ರಕಾಶ ಎಂದು ಗುರುತಿಸಲಾಗಿದೆ.
ಕಾಣೆಯಾದವರಲ್ಲಿ ನಾಲ್ಕು ಮಂದಿ ಕೇರಳದವರು, ಮೂವರು ಆಂಧ್ರಪ್ರದೇಶದವರು ಹಾಗೂ ಓರ್ವ ಪಂಜಾಬ್ ಮೂಲದ ಭಾರತೀಯರೆಂದು ವಿದೇಶಾಂಗ ಖಾತೆಯ ಮೂಲಗಳು ತಿಳಿಸಿವೆ.
ನಾಪತ್ತೆಯಾದವರನ್ನು ಕೇರಳದ ಕೋಝಿಕ್ಕೋಡ್‌ನ ಸಜಿತ್ ಕುಮಾರ್, ತೃಶ್ಶೂರು-ಗುರುವಾಯೂರಿನ ಉದಯನ್,ಕೇರಳ ಎರ್ನಾಕುಳಂನ ಮೊಹದ್ ಆಲಿ, ರ್ನಾಕುಳಂ ಬಿನು, ಆಂಧ್ರದವರಾದ ಧರ್ಮರಾಜನ್, ಸಾಮಿ, ಶ್ರೀನು ಎಂದು ಗುರುತಿಸಲಾಗಿದೆ.
ಆದರೆ ನಾಪತ್ತೆಯಾಗಿರುವ ಪಂಜಾಬ್ ಮೂಲದ ದುರ್ದೈವಿಯ ಹೆಸರು ಇನ್ನೂ ಗುರುತಿಸಲಾಗಿಲ್ಲ.
|