ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಭೀಕರ ಸರಣಿ ಸ್ಫೋಟದ ಸಂಚು ಹೂಡಿದ ಇಬ್ಬರಿಗೆ ಇಂದು ಟಾಟಾ ವಿಶೇಷ ನ್ಯಾಯಾಲಯವು ಅನುಕ್ರಮ ಜೀವಾವಧಿ ಹಾಗೂ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
ಸಂಚುಗಾರರಾದ ಶೇಕ್ ಆಲಿ ಶೇಕ್ ಉಮರ್ ಎಂಬಾತನಿಗೆ ಜೀವವಧಿ ಶಿಕ್ಷೆಯಾದರೆ, ಗ್ಯಾಂಗ್‌ಸ್ಟರ್ ಇಝಾಜ್ ಪಠಾಣ್‌ಗೆ 10ವರ್ಷ ಕಾಲಾವಧಿಯ ಕಠಿಣ ಕಾರಾವಾಸ ಶಿಕ್ಷೆ ನೀಡಲಾಗಿದೆ. ದುಬೈಯಲ್ಲಿ ನಡೆಸಲಾದ ಸಂಚಿನಲ್ಲಿ ಪಾಲ್ಗೊಂಡಿರುವುದಕ್ಕಾಗಿ 2.25 ಲಕ್ಷದ ದಂಡ ಪಾವತಿಸಲು ಸಹ ಆದೇಶವಾಗಿದೆ.
ಟೈಗರ್ ಮೆಮನ್ ಪರವಾಗಿ ಸ್ಫೋಟಕಗಳನ್ನು ತಂದಿಳುಹಲು ನಡೆಸಿದ ಸಂಚಿನಲ್ಲೂ ಈತ ಆರೋಪಿಯಾಗಿದ್ದಾನೆ. ಸರ್ಕಾರದ ಪರವಾಗಿ ವಾದಿಸಿದ ವಿಶೇಷ ಅಭಿಯೋಜಕ ಉಜ್ವಲ್ ನಿಕ್ಕಾಂ ಹೇಳಿಕೆಯಂತೆ ಈ ಇಬ್ಬರಿಗೂ ನಿರೀಕ್ಷಿಸಿರುವುದಕ್ಕಿಂತ ಕಡಿಮೆ ಶಿಕ್ಷೆಯಾಗಿದೆ, ತೀರ್ಪಿನ ಪ್ರತಿ ಅಭ್ಯಸಿಸಿದ ಬಳಿಕ ಮೇಲ್ಮನವಿಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ಆರೋಪಿ ಉಮರ್ 1.5 ಲಕ್ಷ ರೂ.ಗಳ ದಂಡ ವಿಧಿಸಬೇಕೆಂದು ಟಾಡಾ ನ್ಯಾಯಾಲಯದ ನ್ಯಾಯಾಧೀಶ ಜ.ಪಿ.ಡಿ.ಖೋಡೆ ವಿಧಿಸಿದ್ದಾರೆ. ಪ್ರಸ್ತುತ 1993ರ ಆಸ್ಫೋಟದಲ್ಲಿ 157 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.
ಸಂಜಯ್ ಹಾಜರು : ಸರಣಿ ಸ್ಫೋಟ ಹಾಗೂ ಅಕ್ರಮ ಆಯುಧ ಹೊಂದಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಇಂದು ನ್ಯಾಯಾಲಯದಲ್ಲಿ ಹಾಜರಿದ್ದರು.
|