ಜರ್ಮನಿಯಲ್ಲಿ ಆರಂಭವಾಗಿರುವ ಜಿ8 ರಾಷ್ಟ್ರಗಳ ಶೃಂಗ ಸಮ್ಮೇಳನದ ಎರಡನೇ ದಿನವಾದ ಇಂದು ಭಾರತದ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಚೀನಿಅಧ್ಯಕ್ಷ ಹು ಜಿಂತಾವೊ ಅವರನ್ನು ಭೇಟಿ ಮಾಡುವರು, ನಾಳೆ ಅಮೇರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರನ್ನು ಭೇಟಿ ಮಾಡುವರು.
ಚೀನಾದೊಂದಿಗೆ ಅತ್ಯುತ್ತಮ ನೆರೆಯವರು ಎಂಬ ಕುರಿತಾದ ಮಾತುಕತೆಯಾದರೆ, ಅಮೇರಿಕಾದೊಂದಿಗೆ ನಾಗರಿಕ ಬಳಕೆಯ ಅಣುಶಕ್ತಿ ಒಪ್ಪಂದ ವೇರ್ಪಡುವ ಕುರಿತು ಬಹು ನಿರೀಕ್ಷಿತ ಯೋಜನೆಯ ಮಾತುಕತೆ ನಡೆಯಲಿದೆ ಎಂದು ಪ್ರಧಾನಿ ಆಪ್ತವಲಯಗಳು ತಿಳಿವೆ.
ತನ್ಮಧ್ಯೆ, ಅಭಿವೃದ್ಧಿ ಶೀಲ ರಾಷ್ಟ್ರಗಳ ಮಾಲಿನ್ಯಗಳಿಂದ ನಿಸರ್ಗದ ಹಸಿರು ಅನಿಲ ವಲಯಕ್ಕೆ ಧಕ್ಕೆ ಬರುತ್ತಿದೆ ಎಂಬ ಜಿ8 ರಾಷ್ಟ್ರಗಳ ಆರೋಪವನ್ನು ತಮ್ಮ ವ್ರತಿಪಾದನೆ ಮೂಲಕ ಪರಿವರ್ತಿಸಲು ಶೃಂಗಸಭೆಯ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಯಶಸ್ವಿಯಾಗಿದ್ದು, ಹವಾಮಾನ ವೈಪರೀತ್ಯಕ್ಕೆ ಎಲ್ಲರೂ ಹೊಣೆ, ಈ ಹೆಸರಲ್ಲಿ ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೆ ಅಡಚಮೆಯಾಗಬಾರದೆಂಬ ಒಮ್ಮತಕ್ಕೆ ಬರಲಾಗಿದೆ.
ಸಿಂಗ್ ಹಾಗೂ ಬುಶ್ ಭೇಟಿ ಸಂದರ್ಭದಲ್ಲಿ ನಾಗರಿಕ ಬಳಕೆಯ ಅಣುಶಕ್ತಿ ಒಪ್ಪಂದಕ್ಕೆ ಅಡಚಣೆಯಾಗಿರುವ ವಿಷಯಗಳ ಕುರಿತು ಉಭಯ ರಾಷ್ಟ್ರಗಳ ವರಿಷ್ಠಾಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿರುವರು.
|