ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ದಿಗಂಬರ ಕಾಮತ್ ಗೋವಾ ಮುಖ್ಯಮಂತ್ರಿ
webdunia
GOA CM DIGAMBAR KAMATH
PTI
ಗೋವಾ ರಾಜ್ಯದ ನೂತನ ಮುಖ್ಯ ಮಂತ್ರಿಯಾದಿ ದಿಗಂಬರ ಕಾಮತ್‌ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ನಿನ್ನೆ ಅಪರಾಹ್ನದಿಂದ ಜರುಗಿದ ಶಾಸಕಾಂಗ ಸಭೆಯಲ್ಲಿ ನಾಯಕನ ಆಯ್ಕೆಗಾಗಿ ನಿಕಟಪೂರ್ವ ಮುಖ್ಯಮಂತ್ರಿ ಪ್ರತಾಪ ಸಿಂಹ ರಾಣೆ, ಪಕ್ಷ ಮುಖಂಡ ರವಿ ನಾಯ್ಕ್ ಅವರ ಹೆಸರುಗಳಷ್ಟೇ ಇತ್ತಾದರೂ ರವಿ ನಾಯ್ಕ್ ಮತ್ತು ರಾಣೆ ಇವರ ಹಗ್ಗಜಗ್ಗಾಟದಲ್ಲಿ ರಂಜನೀಯ ಸೂತ್ರವಾಗಿ ಕಾಮತ್‌ ಅವರನ್ನು ಹೈಕಮಾಂಡ್‌ ಆರಿಸಿದೆ.

ಕಾಂಗ್ರೆಸ್‌ ಪಕ್ಷದ ವೀಕ್ಷಕರಾಗಿ ಆಗಮಿಸಿದ ಸುಶೀಲ್‌ ಕುಮಾರ್‌ ಶಿಂಧೆ , ಪಕ್ಷದ ಗೋವಾ ಉಸ್ತುವಾರಿ ಮಾರ್ಗರೆಟ್‌ ಆಳ್ವ, ಆರ್ ಕೆ ಧವಾನ್‌ ಇವರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಎಲ್ಲಾ ಶಾಸಕರನ್ನೂ ಪ್ರತ್ಯೇಕ ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದ ವೀಕ್ಷಕರು, ಸಮನ್ವಯ ವ್ಯಕ್ತಿ ಎಂಬಂತೆ ಕಾಮತ್‌ ಅವರ ಹೆಸರನ್ನು ಘೋಷಿಸಿದರು.

ದಿಗಂಬರ ನಾಯ್ಕ್‌ ಅವರು ನಿಕಟಪೂರ್ವ ರಾಣೆ ಸರ್ಕಾರದಲ್ಲಿ ಸಚಿವರಾಗಿದ್ದು, ಮಡಗಾಂವ್‌ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕಾಮತ್‌ ಅವರ ಆಯ್ಕೆಯಿಂದಾಗಿ ರವಿ ನಾಯ್ಕ್ ಬಣ ಹಾಗೂ ರಾಣೆ ಬಣ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಗೋವಾದಲ್ಲಿನ ಬಣರಾಜಕೀಯಕ್ಕೆ ತೇಪೆ ಹಾಕಲು ಹೈಕಮಂಡ್‌ ಪ್ರಯತ್ನಿಸಿದೆಯಾದರೂ ಭಿನ್ನಮತ ಭುಗಿಲೇಳುವ ಲಕ್ಷಣವೆಂಬಂತೆ ರವಿನಾಯ್ಕ್‌ ಬಣ ಹೈಕಮಾಂಡ್‌ ವಿರುದ್ಧ ಘೋಷಣೆ ಕೂಗಿದ ಘಟನೆಗಳೂ ಈ ಸಂದರ್ಭದಲ್ಲಿ ಜರುಗಿದುವು.
ಮತ್ತಷ್ಟು
ಜಿ8:ನಾಳೆ ಮನ್-ಬುಶ್‌ ಭೇಟಿ
ಮುಂಬೈ ಸರಣಿ ಸ್ಫೋಟ ಇಬ್ಬರಿಗೆ ಶಿಕ್ಷೆ
ಒಮಾನ್‌ನಲ್ಲಿ ಭಾರತೀಯ ಸಾವು,8 ನಾಪತ್ತೆ
ರಾಷ್ಟ್ರಪತಿ ಹುದ್ದೆ ಕನ್ನಡಿಗ ಮೊಯ್ಲಿಗೆ ಒಲಿಯುವುದೇ?
ಓಮಾನ್‌ ಗೊನು ತೂಫಾನ್- ದೆಹಲಿ ಕ್ರಮ
'ಮೃತ' ತರುಣಿಯ ಅವಯವಗಳ ದಾನ!