ಗೋವಾ ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ದಿಗಂಬರ ಕಾಮತ್ ಅವರು ರೂಢಿಯಾ ಪ್ರತಿಜ್ಞಾ ವಿಧಿಗಳಂತೆ ಗೋವಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಗೋವಾ ರಾಜ್ಯಪಾಲರ ಕಾರ್ಯಾಲಯ ರಾಜ್‌ಭವನವಿರುವ ಪಣಜಿಯ ಡೋನಾಪೋವ್ಲಾದಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಅವರು ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ದಿಗಂಬರ್ ಅವರು 19 ಸದಸ್ಯ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದು, ಎನ್‌ಸಿಪಿ ಉಪಮುಖ್ಯ ಮಂತ್ರಿಸ್ಥಾನಕ್ಕಾಗಿ ಹಕ್ಕು ಸ್ಥಾಪಿಸಿದೆ.
ನಿನ್ನೆ ಅಪರಾಹ್ನದಿಂದ ಜರುಗಿದ ಶಾಸಕಾಂಗ ಸಭೆಯಲ್ಲಿ ನಾಯಕನ ಆಯ್ಕೆಗಾಗಿ ನಿಕಟಪೂರ್ವ ಮುಖ್ಯಮಂತ್ರಿ ಪ್ರತಾಪ ಸಿಂಹ ರಾಣೆ, ಪಕ್ಷ ಮುಖಂಡ ರವಿ ನಾಯ್ಕ್ ಅವರ ಹೆಸರುಗಳಷ್ಟೇ ಇತ್ತಾದರೂ ರವಿ ನಾಯ್ಕ್ ಮತ್ತು ರಾಣೆ ಇವರ ಹಗ್ಗಜಗ್ಗಾಟದಲ್ಲಿ ರಂಜನೀಯ ಸೂತ್ರವಾಗಿ ಕಾಮತ್ ಅವರನ್ನು ಹೈಕಮಾಂಡ್ ಆರಿಸಿದೆ.
ಈ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಪಕ್ಷದ ವೀಕ್ಷಕರಾಗಿ ಹೈಕಮಾಂಡ್‌ನಿಂದ ಆಗಮಿಸಿದ ಸುಶೀಲ್ ಕುಮಾರ್ ಶಿಂಧೆ , ಪಕ್ಷದ ಗೋವಾ ಉಸ್ತುವಾರಿ ಮಾರ್ಗರೆಟ್ ಆಳ್ವ, ಆರ್ ಕೆ ಧವಾನ್ ಇವರು ಕಾಮತ್ ಅವರ ಹೆಸರನ್ನು ಘೋಷಿಸಿದ್ದರು.
ಕಾಂಗ್ರಸ್ ಪುನಃ ಅಧಿಕಾರಕ್ಕೇರಿದರೂ ರೂಢಿಯಂತೆ ಮುಖ್ಯಮಂತ್ರಿಯಾಗುವ ಅವಕಾಶವು ಪ್ರತಾಪ ಸಿಂಹ ರಾಣೆಯವರ ಕೈ ತಪ್ಪಿದೆ. ಮುಖ್ಯಮಂತ್ರಿಯಾಗಲು ಹಾತೊರೆದಿದ್ದ ರವಿ ನಾಯ್ಕ್ ಅವರೂ ಹೈಕಮಾಡ್ ತೀರ್ಮಾನದಿಂದ ಭ್ರಮನಿರಸನವಾದಂತಾಗಿದೆ.
|