ದೇಶದ ಮಹಾನಗರಗಳಲ್ಲಿ ಮಾತ್ರ ಕಾಣಸಿಗುವ ಮನುಷ್ಯಎಳೆಯು ಸೈಕಲ್ ರಿಕ್ಷಗಳನ್ನು ಸ್ಥಗಿತಗೊಳಿಸಲು ಸ್ಥಳೀಯ ಆಡಳಿತಗಳು ತೀರ್ಮಾನಿಸಿವೆ.
ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಶನಿವಾರ ಆರಂಭವಾದ ಸಿಎನ್‌ಜಿ ( ನೈಸರ್ಗಿಕ ಅನಿಲ ಇಂಧನ) ಚಾಲಿತ ಬಸ್‌ಗಳನ್ನು ತಡೆಯಲಾಯಿತು.
ಸೈಕಲ್ ರಿಕ್ಷಾ ಚಾಲಕರು ಸಿಎನ್‌ಜಿ ಬಸ್(ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್)ನಿಂದ ಚಲಿಸುವ ಬಸ್‌ಗಳನ್ನು ರಸ್ತೆಯಲ್ಲಿ ತಡೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದರು. ಸಿಎನ್‌ಜಿ ಬಸ್‌ಗಳನ್ನು ಆರಂಭಿಸುವುದರೊಂದಿಗೆ ಸೈಕಲ್ ರಿಕ್ಷಾಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ದೆಹಲಿ, ಕೋಲ್ಕೊತ್ತಾ, ಚೆನ್ನೈ ಮುಂತಾದ ನಗರಗಳಲ್ಲಿ ಮಾತ್ರ ಇದೀಗ ಮನುಷ್ಯ ಚಾಲಿತ ಸೈಕಲ್ ರಿಕ್ಷಾಗಳು ಬಾಡಿಗೆಗೆ ಜನರನ್ನು ಹೊತ್ತೊಯ್ಯುತ್ತಿವೆ. ಅಲ್ಲೆಲ್ಲಾ ಇನ್ನುಮುಂದೆ ಸಿಎನ್‌ಜಿ ಬಸ್‌ಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.
|