ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಕೇರಳದಲ್ಲಿ ಚಿಕೂನ್‌ ಗುನ್ಯಾ- ಸ್ಥಿತಿ ಗಂಭೀರ
webdunia
ದೇವರನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ಕೇರಳಕ್ಕೀಗ ಪಿಡುಗಿನ ಭೀತಿ. ಅಲ್ಲೀಗ ಚಿಕೂನ್‌ಗುನ್ಯಾ ರೋಗ ಆವರಿಸತೊಡಗಿದೆ.

ಇದುವರೆಗೆ 7000 ಪ್ರಕರಣಗಳು ದಾಖಲಾಗಿವೆ. ನೆರವಿಗಾಗಿ ಸೇನೆಗೆ ವಿನಂತಿಸಲಾಗಿದೆ.

ಇದುವರೆಗೆ ದಾಖಲಾಗಿರುವ 7000 ಶಂಕಿತ ಪ್ರಕರಣಗಳಲ್ಲಿ 122 ದೃಢಪಟ್ಟಿವೆ. ರಾಜ್ಯದ 14 ಜಿಲ್ಲೆಗಳಲ್ಲಿ ಏಳರಲ್ಲಿ ಚಿಕೂನ್‌ ಗುನ್ಯಾ ವ್ಯಾಪಿಸಿದೆ. ರಾಜ್ಯ ಸರ್ಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವೈದ್ಯರು ಮತ್ತು ಅನುಬಂಧಿತ ತಂಡವನ್ನು ಪ್ರದೇಶಗಳಿಗೆ ಧಾವಿಸುವಂತೆ ಆದೇಶಿಸಿದೆ.

ರಾಜ್ಯಸರ್ಕಾರವು ಚಿಕೂನ್‌ಗುನ್ಯಾ ಬಾಧಿತ ಪ್ರದೇಶಗಳಲ್ಲಿ ಸುರಕ್ಷಾ ಕಾರ್ಯಕ್ಕಾಗಿ ಸೇನೆಯ ನೆರವು ಪಡೆದಿದೆ. ಇದರಿಂದ ಆರೋಗ್ಯ ಸುರಕ್ಷಾ ಕ್ರಮಗಳು ಸಾಧ್ಯ ಎಂಬುದಾಗಿ ಸರ್ಕಾರ ತಿಳಿಸಿದೆ. ರಾಜಕೀಯ ಪಕ್ಷಮುಖಂಡರು ಇತರೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿರಿಸಿ ಪರಿಹಾರ ತುರ್ತು ಚರ್ಚೆಗಾಗಿ ಸಭೆ ಸೇರಿದ್ದಾರೆ.

ಪಟ್ಟಣಂತಿಟ್ಟ ಜಿಲ್ಲೆಯ ಚಿಟ್ಟಾರ್‌ ಪಂಚಾಯ್ತಿಯೊಂದರಲ್ಲೇ 29 ಪಂರಕರಣಗಳು ದೃಢಪಟ್ಟಿವೆ. ಕೇರಳದಲ್ಲಿ ಚಿಕೂನ್‌ ಗುನ್ಯಾ ವ್ಯಾಪಕ ಹರಡುತ್ತಿರುವುದನ್ನು ಗಮನಿಸಿ ನೆರೆಯ ತಮಿಳ್ನಾಡು ಹಾಗೂ ಕರ್ನಾಟಕ ರಾಜ್ಯಗಳೂ ಜಾಗೃತವಾಗಿವೆ.
ಮತ್ತಷ್ಟು
ಸೈಕಲ್‌ ರಿಕ್ಷಾಗಳಿಗೆ ಮಾರಕವಾದ ಸಿಎನ್‌ಜಿ ಬಸ್
ಕಳ್ಳಸಾಗಣಿಕೆ,ಕಟಾರ,ವಿಚಾರಣೆ ಸಂಸದ ಕಟಾರ ಜೈಲು ವಿಸ್ತರಣೆ
ರಾಷ್ಟ್ರಪತಿ- ಶಿವರಾಜ್‌ಗೆ ಎನ್‌ಸಿಪಿ ವಿರೋಧ
ತಿರುಪತಿ-ಆಂಧ್ರಾ ಕ್ಷೇತ್ರಗಳು ಹಿಂದೂಗಳಿಗೆ ಮಾತ್ರ
ಭಾರತದ ನೆಲದಲ್ಲಿ ಅಲ್‌ಖೈದಾ ನೆಲೆ!
ಅವಳಿ ಮಕ್ಕಳಿಗೆ 6000 ರೂ.!