ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಭಾರತಕ್ಕೆ ಅಣುತ್ಯಾಜ್ಯ ಮರುಸಂಸ್ಕರಣ ಘಟಕ ಅಗತ್ಯ
webdunia
Pranab Mukharjee
ND
ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಉಂಟಾದ ತೊಡಕನ್ನು ನಿವಾರಿಸುವ ದಿಶೆಯಲ್ಲಿನ ಭಾರತ ಹೊಸ ಪ್ರಸ್ತಾಪದ ಬೆನ್ನಲ್ಲೇ ನಿಮ್ಮ ಸಮಸ್ಯೆಗಳನ್ನು ನಮಗೆ ವರ್ಗಾಯಿಸಬೇಡಿ ಎಂದು ಅಮೆರಿಕಾಗೆ ಭಾರತದ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಭಾರತಕ್ಕೆ ಮರುಸಂಸ್ಕರಣ ಹಕ್ಕು ಅತಿ ಅಗ್ಯತವಾಗಿರುವುದನ್ನು ಒತ್ತಿ ಹೇಳಿದ ಮುಖರ್ಜಿ, ಈ ನಾಗರಿಕ ಪರಮಾಣು ಒಪ್ಪಂದದಿಂದಾಗಿ ದೇಶದ ಭದ್ರತಾ ವ್ಯವಸ್ಥೆಗೆ ಯಾವುದೇ ಹಾನಿಯಾಗುವುದನ್ನು ಸರ್ಕಾರ ಬಯಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಅವರಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಅವರು(ಅಮೆರಿಕಾ) ಹೇಳಿದ್ದಾರೆ. ನಿಮ್ಮ ಸಮಸ್ಯೆಗಳನ್ನು ನಮಗೆ ಹಸ್ತಾಂತರಿಸ ಬೇಡಿ ಎಂದು ನಾವು ಅವರಿಗೆ ತಿಳಿಸಿದ್ದೇವೆ ಎಂದು ಭಾರತಕ್ಕೆ ಮರುಸಂಸ್ಕರಣ ಹಕ್ಕನ್ನು ನೀಡುವಾಗಿನ ವಾಷಿಗ್ಟಂನ್‌ನ ಅಸಮ್ಮತಿಯನ್ನು ಉಲ್ಲೇಖಿಸುತ್ತಾ ಮುಖರ್ಜಿ ಟಿವಿ ಸಂದರ್ಶನದಲ್ಲಿ ಈ ರೀತಿ ಹೇಳಿದರು.

2005 ಮತ್ತು ಮಾರ್ಚ್ 2006ರ ಜಂಟಿ ಹೇಳಿಕೆಯಲ್ಲಿ ಏನು ಒಪ್ಪಂದವಾಗಿತ್ತು ಹಾಗು ಸಂಸತ್ತಿನಲ್ಲಿನ ನಮ್ಮ ಬದ್ದತೆ ಏನು ಎಂಬುದರ ಬಗ್ಗೆ ಅವರಿಗೆ ಈಗಾಗಲೆ ಅರಿವಿದೆ. ಆದ್ದರಿಂದ ಈ ಮಿತಿ ಒಳಗೆ 123 ಒಪ್ಪಂದಕ್ಕೆ ಸಹಿಹಾಕಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು
ಕೇರಳದಲ್ಲಿ ಚಿಕೂನ್‌ ಗುನ್ಯಾ- ಸ್ಥಿತಿ ಗಂಭೀರ
ಸೈಕಲ್‌ ರಿಕ್ಷಾಗಳಿಗೆ ಮಾರಕವಾದ ಸಿಎನ್‌ಜಿ ಬಸ್
ಕಳ್ಳಸಾಗಣಿಕೆ,ಕಟಾರ,ವಿಚಾರಣೆ ಸಂಸದ ಕಟಾರ ಜೈಲು ವಿಸ್ತರಣೆ
ರಾಷ್ಟ್ರಪತಿ- ಶಿವರಾಜ್‌ಗೆ ಎನ್‌ಸಿಪಿ ವಿರೋಧ
ತಿರುಪತಿ-ಆಂಧ್ರಾ ಕ್ಷೇತ್ರಗಳು ಹಿಂದೂಗಳಿಗೆ ಮಾತ್ರ
ಭಾರತದ ನೆಲದಲ್ಲಿ ಅಲ್‌ಖೈದಾ ನೆಲೆ!