ಕ್ರಾಂತಿ ಕಾರಿ ಕವಿ , ಸಾಹಿತಿ, ಹಾಡುಗಾರ ಗದ್ದಾರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆಂಧ್ರಾದ ಪ್ರಗತಿಗಾಮಿ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಅವರು ಮತ್ತೆ ಜನಜಾಗೃತಿ ಗೀತೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ.
ಕರ್ನಾಟಕಕ್ಕೂ ಅನೇಕಬಾರಿ ಭೇಟಿ ನೀಡಿದ್ದ ಗದ್ದಾರ್ ವಿದ್ಯಾವಂತ ಯುವಕರು, ಬುದ್ಧಿಜೀವಿಗಳು, ಪ್ರಗತಿವಾದಿ ಪ್ರಾಧ್ಯಾಪಕರ ಮನದಲ್ಲಿ ಜಾಗ ಪಡೆದಿದ್ದರು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಈ ಕುರಿತು ವಿವಾದವೆದ್ದಿದ್ದೂ ಇದೆ. ಅಂತಹ ಗದ್ದಾರ್ ಭಾನವಾರ ಹೈದ್ರಾಬಾದ್‌ನಲ್ಲಿ ತಮ್ಮ ಜಾಗೃತಿ ಗೀತೆಗಳ ಾರ್ಯಕ್ರಮ ನಡೆಸಿಕೊಟ್ಟರು.
ನಕ್ಸಲರು, ಕ್ರಾಂತಿಕಾರಿಗಳು, ಪ್ರಗತಿಗಾಮಿ ಸಮಾಜವಾದಿಗಳ ಯಾದಿಯಲ್ಲಿರುವ ಗದ್ದಾರ್ ಅವರ ಹೆಸರು ಅವರ ಕ್ರಾಂತಿ ಗೀತೆಗಳಿಂದಾಗಿ ಬಂದಿದೆ. ಅವರ ಹಾಡುಗಳು, ಹಾಡುಗಾರಿಕೆ, ಜಾಗೃತಿ ಲೇಖನಗಳು ಯುವಕರನ್ನು ತಟ್ಟುತ್ತಿವೆ ಎಂಬುದು ಸರ್ಕಾರಗಳಿಗೂ ತಲೆಬೇನೆಯಾಗಿರುವುದು ಇತಿಹಾಸ.
ತೆಲಂಗಾಣ ಜಾಗರಣ ಸಮಿತಿ ಆಶ್ರಯದಲ್ಲಿ ಭಾನುವಾರ 'ಅಟ್ಟ -ಪಟ್ಟಾ' (ಜನಜಾಗೃತಿ) ಎಂಬ ಕಾರ್ಯಕ್ರಮವನ್ನವರು ನಡೆಸಿಕೊಟ್ಟರು.
|