ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳ ಹಾಗೂ ಮುಂದುವರಿಯದಿರುವ ರಾಷ್ಟ್ರಗಳ ನಡುವಿನ ತಾರತಮ್ಯ ಧೋರಣೆಯ ವಿರುದ್ದ ಭಾರತದ ಪ್ರಧಾನಿ ಡಾ ಮನಮೋಹನ್ ಸಿಂಗ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿ-8 ಶೃಂಗ ಸಭೆಯಲ್ಲಿ ಭಾಗವಹಿಸಿ ಮರಳುತ್ತಿದ್ದ ಸಂದರ್ಭದಲ್ಲಿ ತಮ್ಮ ಆಕ್ರೋಶವನ್ನು ಮಾಧ್ಯಮ ಪ್ರತಿನಿಧಿಗಳ ಎದುರು ವ್ಯಕ್ತಪಡಿಸಿದರು. ನಾವು ಜಿ-8 ರಲ್ಲಿ ಕ್ರಿಯಾಶಿಲರಾಗಿ ಭಾಗವಹಿಸುವುದಿಲ್ಲ ಮತ್ತು ಈ ಶೃಂಗ ಸಭೆಗೆ ದೂರು ನೀಡುವದಕ್ಕಾಗಿ ಬಂದಿರಲಿಲ್ಲ ವಿನಃ ನಾವು ಕೂಡ ಶೃಂಗ ಸಭೆಯಲ್ಲಿ ಪಾಲುದಾರರಂತೆ ಬಂದಿದ್ದೆವು ಎಂದರು.
ತನ್ನ ಅಸಮಾಧಾನವನ್ನು ಜರ್ಮನಿಯ ಛಾನ್ಸಲರ್ ಎಂಜೆಲಾ ಮರ್ಕೆಲ್ ಅವರಿಗೆ ತಿಳಿಸಿದ್ದು ಮುಂಬರುವ ಜಿ-8 ಶೃಂಗ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿದೆ.
ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತವನ್ನು ಬದಿಗಿಟ್ಟು ಮಾತುಕತೆ ನಡೆಸುವುದರಿಂದ ಪ್ರಯೋಜನ ಇಲ್ಲ ಎಂದು ಅವರು ವಿಶ್ವ ಸಮುದಾಯಕ್ಕೆ ಈ ಸಮಯದಲ್ಲಿ ಎಚ್ಚರಿಕೆ ನೀಡಿದರು.
|