ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಕ್ವಟ್ರೋಚಿ ತೀರ್ಪು -ಯುಪಿಎ ಷಡ್ಯಂತ್ರ
webdunia
ಅರ್ಜೆಂಟೈನಾದಿಂದ ಬೋಫೋರ್ಸ್ ಹಗರಣದ ರೂವಾರಿ ಒಟ್ಟಾವಿಯೋ ಕ್ವಟ್ರೋಚಿಯನ್ನು ಭಾರತದ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ತನಿಖಾ ತಂಡ ವಿಫಲವಾಗಗಿರುವದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಉತ್ತರದಾಯಿತ್ವ ಹೊಂದಿದೆ ಎಂದು ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಟೀಕಿಸಿದ್ದಾರೆ.

ಕ್ವಟ್ರೋಚಿ ಹಸ್ತಾಂತರದಲ್ಲಿ ಅರ್ಜೈಂಟಿನಾ ಸರಕಾರವಾಗಲೀ, ನ್ಯಾಯಾಲಯವಾಗಲೀ ದೋಷಪೂರಿತವಾಗಿಲ್ಲ, ಎಂದಿರುವ ಅಡ್ವಾಣಿ, ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೊಣೆಗೇಡಿತನವೇ ಮಹತ್ವದ ಪ್ರಕರಣಕ್ಕೆ ಹಿನ್ನಡೆಯಾಗುವಂತೆ ಮಾಡಿದೆ ಎಂದರು.

ಅರ್ಜೈಂಟಿನಾ ನ್ಯಾಯಾಲಯಕ್ಕೆ ತಿಳಿಸಿರುವಂತೆ ಕ್ವಟ್ರೋಚಿಗೆ ಸಂಬಂಧಿಸಿದ ಖಾತೆಗಳು ಇನ್ನಿತರ ವಿಷಯಗಳ ಕುರಿತು ಸಾಕ್ಷ್ಯಗಳಿಲ್ಲ ಎಂಬುದಾಗಿ ಯುಪಿಎ ಸರ್ಕಾರ ತಿಳಿಸಿರುವುದರಿಂದ ಹಸ್ತಾಂತರ ನಿರಾಕರಿಸಿ ತೀರ್ಪು ಲಭಿಸುವಂತಾಯಿತು , ಇದರಲ್ಲಿ ಕಾಂಗ್ರೆಸ್‌ ಸರ್ಕಾರದ ಷಡ್ಯಂತ್ರ ಅಡಗಿದೆ ಎಂಬುದಾಗಿ ಅಢ್ವಾನಿ ಆರೋಪಿಸಿದ್ದಾರೆ.

ಕ್ವಟ್ರೋಚಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಎಲ್ ಡುರಾಡೊ ನ್ಯಾಯಾಲಯ ಭಾರತದ ಮನವಿಯನ್ನು ತಿರಸ್ಕರಿಸಿತ್ತು.ಜೂನ್ 13ರಂದು ಇದಕ್ಕೆ ಸಂಬಂಧಿಸಿದ ಪೂರ್ಣ ಆದೇಶದ ಪ್ರತಿಗಳನ್ನು ನೀಡಲಿರುವುದರಿಂದ ಆಡ್ವಾನಿ ಆರೋಪದ ಕುರಿತು ಜಿಜ್ಞಾಸೆ ಹೆಚ್ಚಿದೆ.
ಮತ್ತಷ್ಟು
ಜಿ-8 ರಾಷ್ಟ್ರಗಳ ವಿರುದ್ದ ಪ್ರಧಾನಿ ಅತೃಪ್ತ
ಕ್ರಾಂತಿಕಾರಿ ಸಾಹಿತಿ ಗದ್ದಾರಿಂದ ‌'ಅಟ್ಟಾಪಟ್ಟಾ'
ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ತಾಪಮಾನ
ಭಾರತಕ್ಕೆ ಅಣುತ್ಯಾಜ್ಯ ಮರುಸಂಸ್ಕರಣ ಘಟಕ ಅಗತ್ಯ
ಕೇರಳದಲ್ಲಿ ಚಿಕೂನ್‌ ಗುನ್ಯಾ- ಸ್ಥಿತಿ ಗಂಭೀರ
ಸೈಕಲ್‌ ರಿಕ್ಷಾಗಳಿಗೆ ಮಾರಕವಾದ ಸಿಎನ್‌ಜಿ ಬಸ್