ಆಕೆಗಿನ್ನೂ ಹದಿ ಹರೆಯ. ಆದರೆ ಅದೇನೊ ಅಸ್ವಾಸ್ಥ್ಯ. ಈ ನಿಮಿತ್ತ ಬಾಲಕಿಯನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಫಲಿತಾಂಶ ಕಂಡು ಆಪರೇಷನ್ ನಡೆಸಿದ ವೈದ್ಯರೇ ವಿಸ್ಮಯಗೊಂಡರು.
ಹದಿನೆಂಟರ ಹರೆಯದ ಡೋಲಿ ಆಸ್ಪತ್ರೆಗೆ ಸೇರಿದ್ದು ಹೊಟ್ಟೆ ನೋವು ಮುಂತಾದ ದೈಹಿಕ ಅಸ್ವಾಸ್ಥ್ಯದಿಂದ ಎಂಬುದರಿಂದ ಈ ಕುರಿತು ತಪಾಸಣೆ ನಡೆಸಲಾಯಿತು.
ಕೊನೆಗೆ ಆಪರೇಷನ್ ನಡೆಸಲಾಯಿತು. ಹೊರತೆಗೆದ ಹೊಟ್ಟೆ ಹುಳಗಳ ಪ್ರಮಾಣ ಎಷ್ಟು ಗೊತ್ತೆ 5 ಕೆ.ಜಿ.! ಭಾನುವಾರ ಈ ಶಸ್ತ್ರ ಕ್ರಿಯೆ ನಡೆಸಿದರಲ್ಲದೆ , ಬಾಲಕಿ ಈಗ ಆರೋಗ್ಯವಂತಳಾಗಿದ್ದಾಳೆ
|