ದೇಶದ ಉತ್ತರ ಭಾಗದಲ್ಲಿ ಬಿಸಿಲಿನ ಪ್ರಕೋಪ ದಿಲದಿಂದ ದಿನಕ್ಕೆ ಹೆಚ್ಚುತ್ತಿದ್ದು. ಬಿಸಿಲು ಹಾಗೂ ಬಿಸಿಗಾಳಿಯ ಆಘಾತದಿಂದ ಮೃತ ಪಟ್ಟವರ ಸಂಖ್ಯೆ 117ಕ್ಕೇರಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ತಾಪ 45 ಡಿಗ್ರಿ ಹಂತದಲ್ಲಿ ಹೊಯ್ದಾಡುತ್ತಿದ್ದರೆ, ಮಧ್ಯ ಹಾಗೂ ಉತ್ತರ ಭಾಗದ ರಾಜ್ಯಗಳಲ್ಲಿ 50 ಡಿಗ್ರಿ ಶೆಲ್ಸಿಯಸ್ ವರೆಗೂ ಉಷ್ಣಾಂಶ ಏರುತ್ತಿದೆ. ಇದರೊಂದಿಗೆ ಬಿಸಿ ಗಾಳಿಯ ಹೊಡೆತ ಸಹಿಸಲಸಾಧ್ಯವಾಗಿದೆ.
ಬಿಸಿಲಿನ ಝಳದಿಂದ ತತ್ತರಿಸಿದ ಜನರು ಪಾರ್ಕ್ ಜಲಾಶಯಗಳಲ್ಲಿ ಮುಳುಗೆದ್ದು ಮೈ ಮನಗಳನ್ನು ತಣಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಬಿಸಿಲಿನ ಹೊಡೆತ ಹಾಗೂ ಮರಣದ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಯಾ ರಾಜ್ಯ ಸರ್ಕಾರಗಳು ಪರಿಹಾರ ಕ್ರಮಗಳ ಬಗ್ಗೆ ಯೊಚಿಸತೊಡಗಿವೆ.
|