ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಸುನಿತಾಗಾಗಿ ಅಟ್ಲಾಂಟಿಸ್‌ ವಾಪಸಾತಿ ವಿಳಂಬ
webdunia
ಬಾಹ್ಯಾಕಾಶ ಕೇಂದ್ರಕ್ಕೆ ಕಳೆದ ವಾರ ಏಳುಮಂದಿ ಗಗನ ಯಾತ್ರಿಗಳೊಂದಿಗೆ ತಲುಪಿರುವ ಖಗೋಳ ನೌಕೆ ಅಟ್ಲಾಂಟಿಸ್‌ನಲ್ಲಿ ಕೆಲವೊಂದು ದೋಷಗಳಿದ್ದು, ಇದರ ದುರಸ್ತಿಗಾಗಿ , ಭೂಮಿಗೆ ವಾಪಸಾತಿ ವಿಳಂಬವಾಗಲಿದೆ.

ಬಾಹ್ಯಾಕಾಶಧಲ್ಲಿ ತೇಲುತ್ತಿರುವ ನಾಸಾದ ಕೃತಕ ಖಗೋಳಕೇಂದ್ರದಲ್ಲಿ ಕಳೆದ ಆರು ತಿಂಗಳಿಂದ ಕಾರ್ಯಾಚರಿಸುತ್ತಿರುವ ಭಾರತೀಯ ಮೂಲದ ಅಮೇರಿಕಾ ವಿಜ್ಞಾನಿ ಸುನಿತಾ ವಿಲ್ಯಂಸ್‌ ಅವರು ಅಟ್ಲಂಟಿಸ್‌ನಲ್ಲಿ ವಾಪಸಾಗಲಿರುವುದರಿಂದ ಅವರ ಸುರಕ್ಷತೆಗಾಗಿ ವಿಳಂಬ ಹಾಗೂ ದುರಸ್ತಿಕಾರ್ಯದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಅಟ್ಲಾಂಟಿಸ್‌ನ ತಾಪಕೇಂದ್ರದಲ್ಲಿ ನಾಲ್ಕು ಇಂಚು ಗಾತ್ರದ ಬಿರುಕು ಉಂಟಾಗಿದೆ. ಇದು ಕ್ಷುಲ್ಲಕ ಎಂದು ಪರಿಗಣಿಸಲಾಗಿದ್ದರೂ, ಪ್ರಮುಖ ವಿಜ್ಞಾನಿ ಸುನಿತಾ ಅವರೂ ಮರಳಲರುವುದರಿಂದ ಸಂಭಾವ್ಯ ಅನಾಹುತ ತಪ್ಪಿಸಲು ನೌಕೆಯನ್ನು ವಿಳಂಬಗೊಳಿಸಿ, ದುರಸ್ತಿಕಾರ್ಯ ತ್ವರಿತಗೊಳಿಸಲಾಗಿದೆ.

ಈ ಹಿಂದೆ ಕಲ್ಪನಾ ಚಾವ್ಲಾ ಹಾಗೂ ಇತರ ಗಗನ ಯಾತ್ರಕರಿದ್ದ ನೌಕೆ ದುರಂತಕ್ಕೀಡಾಗಿ ಹಸಿ ನೆನಪುಗಳಿರುವಂತೆಯೇ ದೋಷಪೂರಿತ ನೌಕೆಯಲ್ಲಿ ಸುನಿತಾ ಅವರನ್ನು ಸಾಗಿಸುವುದಕ್ಕೆ ಇತರ ವಿಜ್ಞಾನಿಗಳು ಆಕ್ಷೇಪಿಸಿರುವುದ್ದರು. ಇದೀಗ ನೌಕೆ ಮರಳಿ ಬರುವುದು ತಡವಾಗಲಿದೆ.
ಮತ್ತಷ್ಟು
ಬಿಸಿಲಿನ ಝಳ- ಸಾವಿನ ಸಂಖ್ಯೆ117
ರೈಲುಗಾಡಿ ಹಳಿತಪ್ಪಿ3 ಸಾವು, ಹಲವರು ಗಾಯ
ಸೈಕಲ್‌ ರಿಕ್ಷ ನಿಷೇಧ- ಸಿಎನ್‌ ಬಸ್ ಸಂಚಾರ
ಬಾಲಕಿಯ ಹೊಟ್ಟೆಯಲ್ಲಿ 5 ಕೆಜಿ ಹುಳ!
ಕ್ವಟ್ರೋಚಿ ತೀರ್ಪು -ಯುಪಿಎ ಷಡ್ಯಂತ್ರ
ಜಿ-8 ರಾಷ್ಟ್ರಗಳ ವಿರುದ್ದ ಪ್ರಧಾನಿ ಅತೃಪ್ತ