ಜಾಗತಿಕ ವಜ್ರವ್ಯವಹಾರದ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಗುಜರಾತ್‌ನ ಬಂದರು ನಗರ ಸೂರತ್ ಇದೀಗ ಹೊಸ ಸುದ್ದಿಯ ಕೇಂದ್ರವಾಗಿದೆ. ಇಲ್ಲೀಗ ಆರೋಗ್ಯ ಕಾರ್ಯಕರ್ತರು ಬ್ಲೂಫಿಲಂ ಥಿಯೇಟರ್‌ಗಳಲ್ಲೂ ವಿನೂತನ ಏಡ್ಸ್ ವಿರುದ್ಧ ಆಂದೋಲನ ಆರಂಭಿಸಿದ್ದಾರೆ.
ಅಶ್ಲೀಲ ಚಿತ್ರ ಪ್ರದರ್ಶಿಸುವ ಥಿಯೇಟರ್‌ಗಳ ಟಿಕೆಟ್ ಕೌಂಟರ್‌ಗಳಲ್ಲಿ ಪ್ರಚಾರ ನಡೆಸುವುದು, ಟೆಕೆಟ್‌ಗಳ ಹಿಂಭಾಗದಲ್ಲಿ ಏಡ್ಸ್, ಸುರಕ್ಷಿತ ಲೈಂಗಿಕತೆಯ ಮಾಹಿತಿ ಚಿತ್ರಣ, ಬ್ಲೂ ಫಿಲಂ ನಡುವೆ ಏಡ್ಸ್ ಜಾಗೃತಿಯ ಕುರಿತಾದ ಸಣ್ಣ ದೃಶ್ಯಾಂಕಗಳನ್ನು ನೀಡಲಾಗುತ್ತಿದೆ.
ಬಂದರುಗಟ್ಟೆಯ ಮಹಾನಗರ ಸೂರತ್‌ನಲ್ಲಿ ವಲಸೆ ಜನರು ಬಹಳಷ್ಟು. ವಿಶ್ವದ ನಾನಾ ಭಾಗದಿಂದ ಆಗಮಿಸುವ ಜನರು ಇಲ್ಲಿ ಸೇರುತ್ತಾರೆ. ಇವರೆಲ್ಲಾ ಒಗ್ಗೂಡುವ ಜಾಗವೆಂದರೆ ಅಶ್ಲೀಲ ಚಿತ್ರಮಂದಿರಗಳು.
ನಗರದಲ್ಲಿ ಅಸಂಖ್ಯಾತ ಮಿನಿ ಥಿಯೇಟರ್‌ಗಳಿದ್ದು ಇವುಗಳ ಮುಖ್ಯ ಪ್ರದರ್ಶನ ಅಶ್ಲೀಲ ಸಿನಿಮಾಗಳು, ಇದರ ವೀಕ್ಷರೆಲ್ಲಾ ವಲಸೆ ಕಾರ್ಮಿಕರು, ನೌಕರರು, ಕುಟುಂಬದಿಂದ ದೂರವಿರುವವರು ಎಂದು ಗುರುತಿಸಿರುವ ಅಧಿಕಾರಿಗಳು ಏಡ್ಸ್ ಸಾಧ್ಯತೆಯನ್ನು ಗಮನಿಸಿ ಹೊಸ ಪ್ರಚಾರ ತಂತ್ರ ಜಾರಿಗೊಳಿಸಿದ್ದಾರೆ.
|