ಸರ್ಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್ ವಾಯುಯಾನ ಸಂಸ್ಥೆ ಸಿಬ್ಬಂದಿಗಳು ಇದೀಗ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ವಿಮಾನಗಳ ಸಂಚಾರ ಸಮಯದಲ್ಲಿ ಅಸ್ತವ್ಯಸತವುಂಟಾಗಿದೆ.
ವಿಮಾನ ಸಂಚಾರವನ್ನು ಮುಷ್ಕರ ಬಾಧಿಸಿದೆ ಎಂದು ಮೂಲಗಳು ತಿಳಿಸಿವೆ. ಸಮಾನ ವೇತನ ವೇತನ ಸೌಲಭ್ಯ, ಸರ್ಕಾರಿ ಸ್ವಾಮ್ಯದ ಇನ್ನೊಂದು ವಾಯುಯಾನ ಸಂಸ್ಥೆ ಏರ್ ಇಂಡಿಯಾದೊಂದಿಗೆ ಹುದ್ದೆಗಳ ಬದಲಾವಣೆಗೆ ಅವಕಾಶ ನೀಡಬೇಕೆಂಬುದು ಮುಷ್ಕರ ನಿರತರ ಪ್ರಮುಖ ಬೇಡಿಕೆಗಳಲ್ಲಿ ಕ್ಲೆವು ಮಾತ್ರ.
ಮಹಾನಗರಗಳನ್ನು ಸಂಪರ್ಕಿಸುವ ಏರ್ಲೈನ್ಸ್ ವಿಮಾನಗಳು ಸ್ಥಗಿತವಾಗಿವೆ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಸೇವೆ ಸ್ಥಗಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಕೋಲ್ಕೊತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಮುಂತಾದ ರಾಜಧಾನಿ ನಗರಗಳಲ್ಲಿನ ಜನಜೀವನವನ್ನು ವಾಯುಯಾನ ಸಂಸ್ಥೆಗಳ ಸಿಬ್ಬಂದಿ ಮುಷ್ಕರ ಬಾಧಿಸಲಿದೆ. ವಾಣಿಜ್ಯ ರಂಗಕ್ಕಂತೂ ತೊಂದರೆ ಇದೆ. ಆದರೆ ಖಾಸಗಿ ವಾಯುಯಾನ ಕಂಪನಿಗಳಿಗೆ ಸುಗ್ಗಿಯಾಗಲಿದೆ.
|