ದೇಶದ ಸರ್ವೋಚ್ಛ ಶಾಸಕಾಂಗ ಕಟ್ಟಡ ಸಂಸತ್‌ನಲ್ಲಿ ಇಂದು ಬೆಳಗ್ಗೆ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಅಗ್ನಿ ಶಾಮಕ ದಳದ ತಕ್ಷಣದ ಕಾರ್ಯಾಚರಣೆಯಿಂದ ನಿಯಂತ್ರಿಸಲಾಗಿದೆ.
ಬೆಳಗ್ಗೆ 8.25ರ ವೇಳೆಗೆ ಈ ದುರಂತ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದ್ದು, ಇದು ಗಂಭೀರ ಸ್ವರೂಪದಲ್ಲಿಲ್ಲ ಸಾಮಾನ್ಯ ಆಕಸ್ಮಿಕ ಎಂದು ತಿಳಿಸಲಾಗಿದೆ. ಆದರೆ ಸುರಕ್ಷಾದಳ ಿದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.
ಬೆಂಕಿ ಹತ್ತಿಕೊಂಡಿರುವ ಮಾಹಿತಿ ತಿಳಿದ ತಕ್ಷಣ ಆವರಣದೊಳಗಿರುವ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಾಲ್ಕು ವಾಹನಗಳ ಸಹಿತ ಧಾವಿಸಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ.
ಸುರಕ್ಷಿತ ಹಾಗೂ ಕಾವಲು ಪಹರೆ ಬಿಗುವಾಗಿರುವ ಪಾರ್ಲಿ ಮೆಂಟ್ ಭವನದಲ್ಲಿ ಅಗ್ನಿ ಅನಾಹುತ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.
|