ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಮತ್ತವರ ಸಹೋದ್ಯೋಗಿ ಸಚಿವರೊಬ್ಬರ ಶಾಸಕತ್ವ ಪ್ರಶ್ನಿಸಿ ಸರ್ವೊಚ್ಛನ್ಯಾಯಾಲಯ ದಾಖಲಾಗಿರುವ ಅರ್ಜಿಯ ಮೇಲಿನ ತೀರ್ಪು ಇಂದು ಹೊರಬೀಳುವ ನಿರೀಕ್ಷೆ ಇದೆ.
ಅರ್ಜಿದಾರ ಅಶೋಕ್ ಪಾಂಡೆ ಆರೋಪಿಸಿರುವಂತೆ ಮಾಯಾವತಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿಲ್ಲ,ಅಲ್ಲದೇ ಆಕೆ ಇನ್ನು ಆರು ತಿಂಗಳೊಳಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅರ್ಹರು ಎಂದು ದೂರಿನಲ್ಲಿ ಹೇಳಲಾಗಿತ್ತು.
ಅಲ್ಲದೆ, ಸಂಸದರಾಗಿರುವಂತೆಯೇ ರಾಜ್ಯ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾಯಾವತಿ ಹಾಗೂ ಕ್ಯಾಬಿನೆಟ್ ಸಚಿವ ಸತೀಶ್ ಚಂದ್ರ ಮಿಶ್ರಾ ಅವರ ಹುದ್ದೆ ಅನರ್ಹ ಎಂದು ಆರೋಪಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು.
ಮಾಯವತಿ ಅವರ ವಕೀಲರಾದ ಶೈಲ್ ಕುಮಾರ್ ದ್ವಿವೇದಿ ಹಾಗೂ ಅರ್ಜಿದಾರ ಅಶೋಕ್ ಪಾಂಡೆ ಇವರ ಹೇಳಿಕೆಗಳನ್ನು ಆಲಿಸಿದ ಬಳಿಕ ಸೋಮವಾರ ಸುಪ್ರೀಂ ಕೋರ್ಟ್ ತೀರ್ಪನ್ನು ಇಂದಿಗೆ ಕಾದಿರಿಸಲಾಗಿತ್ತು..
|