ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಾಯಾವತಿಗೆ ಜೀವದಾನ- ಅರ್ಜಿ ವಜಾ
webdunia
CM mayavathi
PTI
ಉತ್ತರ ಪ್ರದೇಶದಲ್ಲಿ ಪಕ್ಷದ ದಾಖಲೆ ಗೆಲುವಿನೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಮುಖ್ಯಮಂತ್ರಿ ಮಾಯಾವತಿ ಅವರ ಶಾಸಕತ್ವ ಪ್ರಶ್ನಿಸಿ, ಸುಪ್ರಿಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ. ಕಾನೂನಿನ ಉರುಳಿನಿಂದ ಎರಡನೇ ಬಾರಿ 'ಜೀವದಾನ'ವಾದಂತಾಗಿದೆ.

ಸಂಸತ್‌ಸದಸ್ಯ ಹುದ್ದೆ ತ್ಯಜಿಸದೆ ಮುಖ್ಯಮಂತ್ರಿ ಹುದ್ದೆಗೇರಿದ ಮಾಯಾವತಿಗೆ ಪ್ರಸ್ತುತ ಅರ್ಜಿ ಹುದ್ದೆಗೆ ಕುತ್ತು ತರುವ ಸಾಧ್ಯತೆ ಇತ್ತು. ಇದು ವಜಾ ಗೊಂಡಿರುವುದು ವಾರಗಳ ಅಂತರದಲ್ಲಿ ಕಾನೂನಿನ ಉರುಳಿನಿಂದ ಎರಡನೇ ಬಾರಿ 'ಜೀವದಾನ'ವಾದಂತಾಗಿದೆ. ತಾಜ್‌ ಪ್ರಕರಣದಲ್ಲಿ ಇತ್ತೀಚೆಗಷ್ಟೆ ಯುಪಿ ರಾಜ್ಯಪಾಲರು ಆಕೆಯ ವಿರುದ್ಧ ಕ್ರಮ ಕೈಗೊಳ್ಳದಂತೆ ಸಂರಕ್ಷಿಸಿ ಮೊದಲ ಬಾರಿಗೆ ಬಚಾವ್ ಮಾಡಿದ್ದರು.

ಸಂಸದರಾಗಿದ್ದ ಮಾಯಾವತಿ ಆ ಹುದ್ದೆಗೆ ರಾಜೀನಾಮೆ ನೀಡದೆಯೇ ಶಾಸಕರಾಗಿ , ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡೆರಡ ಹುದ್ದೆ ವಹಿಸಿದ್ದಾರೆ. ಇದು ಅಸಂವಿಧಾನಿಕ ಎಂದು ಸರ್ವೋಚ್ಛನ್ಯಾಯಾಲಯದಲ್ಲಿ ದಾಖಲಾದ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜ. ಆರ್ಜಿತ್ ಪಸಾಯತ್ ಹಾಗೂ ಜ.ಪಿ ಪಿ ನಾವೋಲೆಕರ್ ಇವರನ್ನೊಳಗೊಂಡ ಪೀಠ ಪ್ರಸ್ತುತ ಮಾಯಾವತಿ ಪ್ರಕರಣದ ಅರ್ಜಿಯನ್ನು ತಿರಸ್ಕರಿಸಿದೆ.

ಮಾಯಾವತಿಯ ಅವಳಿ ಹುದ್ದೆಗಳ ಕುರಿತಾಗಿರುವ ಅರ್ಜಿಯನ್ನು ಉ.ಪ್ರ.ದ ವಕೀಲ ಅಶೋಕ್‌ ದಾಖಲಿಸಿ ಮುಖ್ಯಮಂತ್ರಿ ಮಾಯಾವತಿ ಹಾಗೂ ಅವರ ಸಹೋದ್ಯೋಗಿ ಸಂಪುಟ ಸಚಿವ ಎಸ್.ಸಿ. ಮಿಶ್ರ ಇವರು ಹಾಲಿ ಸಂಸದರಾಗಿದ್ದಾಗಲೇ ಆ ಹುದ್ದೆ, ತ್ಯಜಿಸಿ ರಾಜ್ಯ ಸಂಪುಟ ವಹಿಸಿಕೊಂಡಿದ್ದಾರೆ ಎಂದು ಸಿಂಧುತ್ವ ಪ್ರಶ್ನಿಸಿದ್ದರು.
ಮತ್ತಷ್ಟು
ಮಾಯಾವತಿ ಗದ್ದುಗೆ - ಇಂದು ಅಂತಿಮ ತೀರ್ಪು
ಸಂಸದೀಯ ಭವನದಲ್ಲಿ ಬೆಂಕಿ ಆಕಸ್ಮಿಕ
ಏರ್ಲೈನ್ಸ್ ಸಿಬ್ಬಂದಿ ಮುಷ್ಕರ-ಸಂಚಾರ ಸ್ಥಗಿತ
ತಾಜ್‌ ಮಹಲಿಗಾಗಿ ಕಲಾವಿದರ ಹೋರಾಟ
ಗುಜರಾತ್‌- ಬ್ಲೂಫಿಲಂ ಜೊತೆಗೆ ಏಡ್ಸ್ ಸಲಹೆ
ಸುನಿತಾಗಾಗಿ ಅಟ್ಲಾಂಟಿಸ್‌ ವಾಪಸಾತಿ ವಿಳಂಬ