ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಜು.19ಹಾಗೂ21:ರಾಷ್ಟ್ರಪತಿ ಚುನಾವಣೆ
webdunia
Chief election commissioner Gopala swami
PTI
ರಾಜಕೀಯ ಪಕ್ಷಗಳು 'ರಾಜಕೀಯೇತರ' ಹುದ್ದೆಯಾಗಿರುವ ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಗಾಗಿ ವಾರದ ಹಿಂದೆಯೇ ದ್ರಾವಿಡ ಪ್ರಾಣಾಯಾಮ ಕಸರತ್ತು ಆರಂಭಿಸಿದ್ದರೂ, ದೇಶದ ಚುನಾವಣಾ ಆಯೋಗ ಇಂದು ಆಯ್ಕೆ ದಿನಾಂಕ ಪ್ರಕಟಿಸಿದೆ.

ಜುಲೈ 24ರಂದು ಅವಧಿ ಪೂರೈಸುತ್ತಿರುವ ರಾಷ್ಟ್ರರಾಷ್ಟ್ರಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ ಬಳಿಕ ಮುಂದಿನ ರಾಷ್ಟ್ರ ಪತಿ ಆಯ್ಕೆ ಚುನಾವಣೆಯು ನಡೆಯಲಿದ್ದು, ಸರ್ವಸಮ್ಮತ ಅಭ್ಯರ್ಥಿ ಆಯ್ಕೆಯಾಗದಿದ್ದರೆ, ಮತದಾನವು ಜುಲೈ 19 ಹಾಗೂ ಮತ ಎಣಿಕೆಯು 21ರಂದು ಜರುಗಲಿದೆ.

ಪ್ರಧಾನ ಚುನಾವಣಾ ಆಯುಕ್ತ ಎನ್‌.ಗೋಪಾಲ ಸ್ವಾಮಿ ಪ್ರಸ್ತುತ ಚುನಾವಣೆ ಘೋಷಿಸಿದ್ದಾರೆ. ಮತದಾನದಲ್ಲಿ ಲೋಕಸಭೆ, ರಾಜ್ಯಸಭಾ ಸದಸ್ಯರು, ರಾಜ್ಯಗಳ ವಿಧಾನ ಸಭೆ, ವಿಧಾನ ಪರಿಷತ್‌ ಸದಸ್ಯರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಪ್ರತಿಯೋರ್ವ ಜನ ಪ್ರತಿ ಪ್ರತಿನಿಧಿ ತಲಾ ಒಂದು ಮತ ಚಲಾಯಿಸುತ್ತಿದ್ದರೂ, ಸಂಸದರ ಮತದ ಮೌಲ್ಯ 708 ಮತ , ಶಾಸಕರ ಮತದ ಮೌಲ್ಯ ಆಯಾ ರಾಜ್ಯಗಳ ಜನ ಸಂಖ್ಯೆ ಆಧರಿಸಿರುತ್ತದೆ.

ಈ ಹಿನ್ನೆಲ್ಲೆಯಲ್ಲಿ ಮೈತ್ರಿಕೂಟಗಳ ಬಲಾಬಲ ನಿರ್ಧರಿತವಾಗುತ್ತದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸಮೂಹಕ್ಕೆ 570000 ಮೌಲ್ಯದ ಮತಗಳು, ಬಜೆಪಿ ನೇತೃತ್ವದ ಎನ್‍ಡಿಎಗೆ 354689, ಎಐಎಡಿಎಂಕೆ,ಎಸ್‌ಪಿ, ಟಿಡಪಿ,ಲೋಕ್‌ದಳ,ಎಜಿಪಿ ಒಟ್ಟಾದರೆ 1,06,281 ಮತಗಳಾಗುತ್ತವೆ.
ಮತ್ತಷ್ಟು
'ವಯಲಾರ್'- ಗುರುವಾಯೂರು ಕ್ಷಮಾಯಾಚನೆ
ಮಾಯಾವತಿಗೆ ಜೀವದಾನ- ಅರ್ಜಿ ವಜಾ
ಮಾಯಾವತಿ ಗದ್ದುಗೆ - ಇಂದು ಅಂತಿಮ ತೀರ್ಪು
ಸಂಸದೀಯ ಭವನದಲ್ಲಿ ಬೆಂಕಿ ಆಕಸ್ಮಿಕ
ಏರ್ಲೈನ್ಸ್ ಸಿಬ್ಬಂದಿ ಮುಷ್ಕರ-ಸಂಚಾರ ಸ್ಥಗಿತ
ತಾಜ್‌ ಮಹಲಿಗಾಗಿ ಕಲಾವಿದರ ಹೋರಾಟ