ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಶೀಘ್ರವೇ ಹೆಚ್‌ಐವಿ ಏಡ್ಸ್ ಮಸೂದೆ
webdunia
ಹೆಚ್‌ಐವಿ- ಏಡ್ಸ್ ಬಾಧಿತರನ್ನು ಸಾಮಾಜಿಕ, ಔದ್ಯೋಗಿಕ, ಆರೋಗ್ಯರಂಗದಲ್ಲಿ ದೂರವಿಡುವ ಕ್ರಮವನ್ನು ಕಾನೂನುರೀತ್ಯ ತಡೆಯುವ ಹೊಸ ಮಸೂದೆಯು ಈ ವರ್ಷ ಜಾರಿಗೊಳ್ಳಲಿದೆ ಕೇಂದ್ರ ಆರೋಗ್ಯ ಮಂತ್ರಿ ಅನ್ಬುಮಣಿ ರಾಂದಾಸ್ ತಿಳಿಸಿದ್ದಾರೆ.

ಪ್ರಸ್ತುತ ಮಸೂದೆಯನ್ನು ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ ಸರ್ಕಾರೇತರ ಸಂಘಟನೆಗಳು, ಹೆಚ್‌ಐವಿ-ಏಡ್ಸ್‌ ವಿರುದ್ಧ ಆಂದೋಲನಗಳಲ್ಲಿ ಕಾರ್ಯನಿರತ ಸಂಸ್ಥೆಗಳೊಂದಿಗೆ ವಿಸ್ತೃತ ಚರ್ಚೆಗಾಗಿ ಇನ್ನಷ್ಟು ವಿಳಂಬ ಮಾಡಲಾಗಿತ್ತು.

ಮಾರಕ ರೋಗ ಬಾಧಿತರನ್ನು ನೌಕರಿ, ಶಿಕ್ಷಣ, ಆರೋಗ್ಯ ಇತ್ಯಾದಿ ರಂಗದಲ್ಲಿ ಪ್ರತ್ಯೇಕಿಸುವುದನ್ನು ಶಿಕ್ಷಾರ್ಹವಾಗಿ ಘೋಷಿಸಿ , ಸಂತ್ರಸ್ತರನ್ನು ಕಾನೂನು ರೀತ್ಯ ಸಂರಕ್ಷಿಸುವ ಅವಕಾಶ ಮಸೂದೆ ಹೊಂದಿದೆ.

ತಪಾಸಣೆ.ಚಿಕಿತ್ಸೆ, ಸಂಶೋಧನೆಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಅಲ್ಲದೆ ಪಕ್ಷಪಾತ ರಹಿತ ಬದುಕಿಗೆ ಅವಕಾಶ ಕಲ್ಪಿಸುವಂತೆ ಮಸೂದೆ ದೃಢವಾಗರುತ್ತದೆ.
ಮತ್ತಷ್ಟು
ಜು.19ಹಾಗೂ21:ರಾಷ್ಟ್ರಪತಿ ಚುನಾವಣೆ
'ವಯಲಾರ್'- ಗುರುವಾಯೂರು ಕ್ಷಮಾಯಾಚನೆ
ಮಾಯಾವತಿಗೆ ಜೀವದಾನ- ಅರ್ಜಿ ವಜಾ
ಮಾಯಾವತಿ ಗದ್ದುಗೆ - ಇಂದು ಅಂತಿಮ ತೀರ್ಪು
ಸಂಸದೀಯ ಭವನದಲ್ಲಿ ಬೆಂಕಿ ಆಕಸ್ಮಿಕ
ಏರ್ಲೈನ್ಸ್ ಸಿಬ್ಬಂದಿ ಮುಷ್ಕರ-ಸಂಚಾರ ಸ್ಥಗಿತ