ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮುಷ್ಕರ-ಪರ್ಯಾಯ ವಿಮಾನ, ಬಿಗುಪಹರೆ
webdunia
ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಏರ್‌ಲೈನ್ಸ್‌ ವಾಯುಯಾನ ಸಂಸ್ಥೆ ಸಿಬ್ಬಂದಿಗಳು ಇದೀಗ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ಪರ್ಯಾಯ ಕ್ರಮವನ್ನು ಇಲಾಖೆ ಕೈಗೊಳ್ಳುತ್ತಿದ್ದು, ನಿಲ್ದಾಣಗಳಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ.

ವಾಯುಯಾನ ಕಾರ್ಪೋರೇಷನ್ ಸಿಬ್ಬಂದಿಗಳ ಮುಷ್ಕರದಿಂದಾಗಿ ವಿಮಾನಗಳ ಸಂಚಾರ ಸಮಯದಲ್ಲಿ ಅಸ್ತವ್ಯಸತವುಂಟಾಗಿದೆ. ಈ ಹಂತದಲ್ಲಿ ತುರ್ತು ಸೇವೆಗೆ ಅಡಚಣೆಯುಂಟಾಗದಂತೆ ವಾಯುಯಾನ ಇಲಾಖೆ ಕೆಲವೊಂದು ವಿಮಾನ ಹಾರಾಟವನ್ನು ಖಚಿತಪಡಿಸುತ್ತಿದೆ.

ಮುಷ್ಕರದ ನಡುವೆಯೂ ಪರ್ಯಾಯ ವ್ಯವಸ್ಥೆಯ ಅಂಗವಾಗಿ ಸಂಚರಿಸುವ ವಿಮಾನಗಳು, ಪ್ರಯಾಣಿಕರಿಗೆ ಪ್ರತಿಭಟನಾಕಾರರಿಂದ ತೊಂದರೆಯಾಗದಂತೆ, ಇನ್ನಿತರ ಅನಪೇಕ್ಷಿತ ಘಟನೆಗಳನ್ನು ನಿವಾರಿಸಲು ಸಶಸ್ತ್ರ ಸಿಬ್ಬಂಧಿಗಳು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬಿಗು ಪಹರೆ ಕಾಯತೊಡಗಿದ್ದಾರೆ.

ವಿಮಾನ ಸಂಚಾರವನ್ನು ಮುಷ್ಕರ ಬಾಧಿಸಿದೆ ಎಂದು ಮೂಲಗಳು ತಿಳಿಸಿವೆ. ಸಮಾನ ವೇತನ ವೇತನ ಸೌಲಭ್ಯ, ಸರ್ಕಾರಿ ಸ್ವಾಮ್ಯದ ಇನ್ನೊಂದು ವಾಯುಯಾನ ಸಂಸ್ಥೆ ಏರ್‌ ಇಂಡಿಯಾದೊಂದಿಗೆ ಹುದ್ದೆಗಳ ಬದಲಾವಣೆಗೆ ಅವಕಾಶ ನೀಡಬೇಕೆಂಬುದು ಮುಷ್ಕರ ನಿರತರ ಪ್ರಮುಖ ಬೇಡಿಕೆಗಳಲ್ಲಿ ಕ್ಲೆವು ಮಾತ್ರ.

ಮಹಾನಗರಗಳನ್ನು ಸಂಪರ್ಕಿಸುವ ಏರ್ಲೈನ್ಸ್ ವಿಮಾನಗಳು ಸ್ಥಗಿತವಾಗಿವೆ, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಸೇವೆ ಸ್ಥಗಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಕೋಲ್ಕೊತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಮುಂತಾದ ರಾಜಧಾನಿ ನಗರಗಳಲ್ಲಿನ ಜನಜೀವನವನ್ನು ವಾಯುಯಾನ ಸಂಸ್ಥೆಗಳ ಸಿಬ್ಬಂದಿ ಮುಷ್ಕರ ಬಾಧಿಸಲಿದೆ. ವಾಣಿಜ್ಯ ರಂಗಕ್ಕಂತೂ ತೊಂದರೆ ಇದೆ. ಆದರೆ ಖಾಸಗಿ ವಾಯುಯಾನ ಕಂಪನಿಗಳಿಗೆ ಸುಗ್ಗಿಯಾಗಲಿದೆ.
ಮತ್ತಷ್ಟು
ಶೀಘ್ರವೇ ಹೆಚ್‌ಐವಿ ಏಡ್ಸ್ ಮಸೂದೆ
ಜು.19ಹಾಗೂ21:ರಾಷ್ಟ್ರಪತಿ ಚುನಾವಣೆ
'ವಯಲಾರ್'- ಗುರುವಾಯೂರು ಕ್ಷಮಾಯಾಚನೆ
ಮಾಯಾವತಿಗೆ ಜೀವದಾನ- ಅರ್ಜಿ ವಜಾ
ಮಾಯಾವತಿ ಗದ್ದುಗೆ - ಇಂದು ಅಂತಿಮ ತೀರ್ಪು
ಸಂಸದೀಯ ಭವನದಲ್ಲಿ ಬೆಂಕಿ ಆಕಸ್ಮಿಕ