ಪಶ್ಚಿಮ ಬಂಗಾಳದಲ್ಲಿ ಮುಂಗಾರು ಮಳೆಯ ಹಾವಳಿ ತೀವ್ರವಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ಸಂಚಾರ ಹಾಗೂ ವಿಮಾನ ಸಂಚಾರವನ್ನೂ ಬಾಧಿಸಿದೆ.
ಮುಸಲಧಾರೆ ಮಳೆ, ನೆರೆಹಾವಳಿಯಿಂದಾಗಿ ರಸ್ತೆಗಳು, ರೈಲುಮಾರ್ಗಗಳು ಜಲಾವೃತವಾಗಿವೆ. ಎನ್‌ಎಸ್‌ಸಿ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಂಚಿನ ಆಘಾತ ಮತ್ತು ಮಳೆಯಿಂದಾಗಿ ವಿಮಾನ ಸಂಚಾರ ತಾಸು ಕಾಲ ವಿಳಂಬವಾಯಿತು.
ನೆರೆಹಾವಳಿಯಿಂದಾಗಿ ಪ್ರದೇಶದಲ್ಲಿ ಸಾಗುವ ರೈಲುಗಾಡಿಗಳನ್ನು ಸ್ಥಗಿತಗೊಳಿಸಲಾಗಿದೆ. ಕೊಲ್ಕೊತ್ತಾ ಸೇರಿದಂತೆ ಪ್ರಮುಖ ನಗರಗಳು ಜಲಾವೃತವಾಗಿವೆ. ಮನೆಗಳಲ್ಲಿ ನೀರು ಸೇರಿವೆ. ತಗ್ಗು ಪ್ರದೇಶದಲ್ಲಿನ ಮನೆಗುಡಿಸಲುಗಳು ಮುಳುಗಿವೆ.
ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಪ್ರಮಾಣದ ಗಾಳಿ, ಮಳೆ ಸಿಡಿಲಿನ ಹೊಡೆತ ನಿರೀಕ್ಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಡಳಿತ ಸರ್ವ ಸಿದ್ಧತೆ ಕೈಗೊಳ್ಳುತ್ತಿದೆ.
ಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರ ಹೇಳಿಕೆಯಂತೆ , ಕೊಠಡಯಲ್ಲಿದ್ದ ರಾಮಚಂದ್ರ ಅವರನ್ನು ಹಲವು ಬಾರಿ ಕೂಗದರೂ ಒಳಗಿಂದ ಪ್ರತಿಕ್ರಿಯೆ ಬರದಿದ್ದಾಗ ಬಾಗಿಲು ಮುರಿದು ಒಳಪ್ರವೇಶಿಸಲಾಯಿತು. ಈ ಸಂದರ್ಭದಲ್ಲಿ ನೆಲದಲ್ಲಿ ಕುಸಿದು ಬಿದ್ದಂತೆ ಶವ ಕಂಡು ಬಂದಿತ್ತು, ಹೃತ್‌ಸ್ಥಂಭನವೇ ಸಾವಿಗೆ ಕಾರಣವಿರಬಹುದು ಎಂದಿದ್ದಾರೆ.
|