ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ದಾವೂದ್‌ ಸೋದರನಿಗೆ ಕ್ಲೀನ್‌ಚಿಟ್
webdunia
ಸಾರಾ-ಸಹಾರ ಅಕ್ರಮ ವ್ಯಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭೂಗತ ವ್ಯಕ್ತಿ ದಾವೂದ್‌ ಇಬ್ರಾಹಿಮ್ ಸೋದರ ಇಕ್ಬಾಲ್‌ ಕಾಸ್ಕರ್‌ನನ್ನು ದೋಷಮುಕ್ತ ಗೊಳಿಸಿ ವಿಶೇಷ ನ್ಯಾಯಾಲಯ ತೀರ್ಪಿತ್ತಿದೆ.

ದಾವೂದ್‌ ಸೋದರ ಇಕ್ಬಾಲ್‌, ಓರ್ವ ಬಿಲ್ಡರ್ಸ್, ನಾಲ್ಕು ಮಂದಿ ಅಧಿಕಾರಿಗಳನ್ನು ಬಿಡುಗಡೆ ಮಾಡಿರುವ ನ್ಯಾಯಾಲಯ, ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಇತರ ಮೂರು ಮಂದಿಯನ್ನು ಶಿಕ್ಷೆಗೆ ಗುರಿಪಡಿಸಿದೆ.

ಶಿಕ್ಷೆಗೀಡಾಗಿರುವ ಆರೋಪಿಗಳನ್ನು ತಾರೀಖ್ ಪ್ರವೀಣ್, ಅಬ್ದುಲ್‌ ರೆಹ್ಮಾನ್ ಅಬ್ದುಲ್‌ ಗಫೂರ್ ಶೇಕ್ ಅಲಿಯಾಸ್ ರೆಹ್ಮಾನ್ ಬೋಸ್ ಹಾಗೂ ಅಬ್ದುಲ್ ಸತ್ತಾರ್ ಹಾಜಿ ಜೀನಾ ಬಾಯ್ ರಧಾನ್ಪುರ್ ಅಲಿಯಾಸ್ ಸತ್ತಾರ್ ತೇಲಿ ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದ ಸಂಯೋಜಿತ ಅಪರಾಧ ನಿಯಂತ್ರಣ ಕಾಯ್ದೆ( ಎಂಸಿಒಎ) ನ್ಯಾಯಾಲಯದ ನ್ಯಾಯಾಧೀಶ ಮೃದುಲಾ ಕಾಸ್ಕರ್‌ ಆರೋಪಿಗಳನ್ನು ಶಿಕ್ಷೆಗೊಳಪಡಿಸಿ ತೀರ್ಪಿತ್ತಿದ್ದಾರೆ.

ಬಿಲ್ಡರ್ ಗುಲಾಂ ನಬಿ ರಮ್ಜಾನ್ ತನ್ವರ್ ಹಾಗೂ ಬೃಹನ್ಮುಂಬಯಿ ಪಾಲಿಕೆಯ ಅಧಿಕಾರಿಗಳಾದ ನರೇಂದ್ರ ರಾಮ್‌ಲೋಚನ್ ರಾಜ್ಬರ್, ಹಾಸ್ಮುಖ್ ಪ್ರವೀಣಚಂದ್ರ ಷಾ, ಕಿರಣ್ ವಸಂತ ಆಚ್ರೇಕರ್ ಹಾಗೂ ಸತೀಶ್ ಮಧುಕರ್ ಸಾಲ್ವೇಕರ್ ಎಂಬವರನ್ನು ಬಿಡುಗಡೆ ಮಾಡಲಾಗಿದೆ.
ಮತ್ತಷ್ಟು
ಕುಂಭದ್ರೋಣ ಮಳೆ- ಪ.ಬಂಗಾಳ ಅಸ್ತವ್ಯಸ್ತ
ಗಾಂಧೀಜಿ ಮೊಮ್ಮಗ ಮೃತಸ್ಥಿತಿಯಲ್ಲಿ ಪತ್ತೆ
ಮುಷ್ಕರ-ಪರ್ಯಾಯ ವಿಮಾನ, ಬಿಗುಪಹರೆ
ಶೀಘ್ರವೇ ಹೆಚ್‌ಐವಿ ಏಡ್ಸ್ ಮಸೂದೆ
ಜು.19ಹಾಗೂ21:ರಾಷ್ಟ್ರಪತಿ ಚುನಾವಣೆ
'ವಯಲಾರ್'- ಗುರುವಾಯೂರು ಕ್ಷಮಾಯಾಚನೆ