ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನಟ ಸಂಜಯ್‌ದತ್ ಗುರುವಾರ ವಿಶೇಷ ಟಾಡಾ ನ್ಯಾಯಾಲಯಕ್ಕೆ ಹಾಜರಾಗಲಿದ್ದು, ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.
ಹದಿನಾಲ್ಕು ವರ್ಷಗಳ ಹಿಂದೆ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 100 ಮಂದಿಯ ವಿಚಾರಣೆ ಪ್ರಗತಿಯಲ್ಲಿದೆ. ಈ ವರೆಗೆ 73 ಮಂದಿಯನ್ನು ಶಿಕ್ಷಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಕುರಿತು ಮೊಕದ್ದಮೆ ಎದುರಿಸುತ್ತಿರುವ ಸಂಜಯ್‌ದತ್, ಇದುವರೆಗೆ ಸುಮಾರು ಒಂದೂ ವರೆ ವರ್ಷಕಾಲ ವಿಚಾರಣಾಧೀನ ಅವಧಿ ಮುಗಿಸಿದ್ದಾರೆ. ಈ ಅವಧಿಯೇ ಶಿಕ್ಷೆಯಷ್ಟಾಗಿ ಹೋಯಿತು ಅನ್ನುವುದು ಅವರ ವಕೀಲರ ವಾದ. ಆದರೆ ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆಯವರ ಅಂತಿಮ ತೀರ್ಪು ಕುತೂಹಲ ಕೆರಳಿಸಿದೆ.
ಟಾಡಾ ನ್ಯಾಯಾಲಯದ ವಿಚಾರಣಾ ಪಟ್ಟಿಯಲ್ಲಿ ಉಲಿದ್ರುವ 27 ಮಂದಿಯಲ್ಲಿ ಸಂಜಯ್‌ದತ್, ಆತನ ಗೆಳೆಯರಾದ ಕೇರ್ಸಿ ಅಡಾಜೆನಿಯಾ,ರುಸ್ಸಿ ಮುಲ್ಲಾ, ಯೂಸುಫ್ ನಲ್ವಾಲಾ ಮುಂತಾದವರು ಪ್ರಮುಖರಾಗಿದ್ದಾರೆ. ಗುರುವಾರದ ವಿಚಾರಣೆ ಪ್ರಮುಖವಾಗಿದೆ.
|