ರಾಜಧಾನಿ ನಗರದ ಇಂಡಿಯನ್ ಇಂಟರ್‌ನೇಷನಲ್ ಸೆಂಟರ್ (ಐಸಿಸಿ) ಮತ ಪಟ್ಟಿರುವ ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಮೊಮ್ಮಗ ಡಾ. ರಾಮಚಂದ್ರ ಗಾಂಧಿ(70) ಅವರ ಸೋದರ ಹಾಗೂ ಪರಿವಾರ ಆಗಮಿಸಿದೆ.
ಮಹಾತ್ಮಾ ಗಾಂಧಿಯವರ ಇನ್ನೋರ್ವ ಪೌತ್ರ ಹಾಗೂ ನಿಧನರಾದ ಡಾ. ರಾಮಚಂದರ ಗಾಂಧಿಯವರ ಸೋದರ ಡಾ. ರಾಜ್ ಮೋಹನ್ ಗಾಂಧಿ ಹಾಗೂ ಇತರ ನೆಂಟರಿಷ್ಟರು ಆಗಮಿಸಿದ್ದು, ಕಳೇಬರದ ಮುಂದುವರಿದ ಕ್ರಿಯಾದಿಗಳು ಸುಗಮವಾಗಲಿವೆ.
ತತ್ವಜ್ಞಾನಿ, ವಿದ್ವಾಂಸ, ಸಾಹಿತಿ ಇತ್ಯಾದಿ ನೆಲೆಗಳಲ್ಲಿ ಗುರುತಿಸಲ್ಪಟ್ಟಿರುವ ಡಾ. ರಾಮಚಂದ್ರ ಗಾಂಧಿಯವರು ಪ್ರಸ್ತುತ ಐಸಿಸಿಗೆ ಪ್ರತಿನಿತ್ಯಭೇಟಿ ನೀಡುತ್ತಿದ್ದು, ಇಂದು ಅಲ್ಲಿನ ಕೊಠಡಿ ಸಂಖ್ಯೆ 15ರಲ್ಲಿ ಇವರ ಕಳೇಬರ ಪತ್ತೆಯಾಗಿದೆ.
ಎಪ್ಪತ್ತರ ಹರೆಯದ ರಾಮಚಂದ್ರ ಗಾಂಧಿ ಅವರ ಸಾವು ಸಹಜ ರೀತಿಯದ್ದಾಗಿದೆ, ಯಾವುದೇ ನಿಗೂಢತೆ ಇಲ್ಲ ಎಂಬುದಾಗಿ ಅಧಿಕಾರಿಗಳ ವರದಿ ತಿಳಿಸಿದೆ. ಹೃದಯಾಘಾತವೇ ಸಾವಿಗೆ ಕಾರಣ ಎಂದೆನ್ನಲಾಗಿದೆ.
|