ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನಟ ಸಂಜಯ್‌ದತ್ ಇಂದು ವಿಶೇಷ ಟಾಡಾ ನ್ಯಾಯಾಲಯಕ್ಕೆ ಹಾಜರಾಗಲಿದ್ದು, ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.
ಹದಿನಾಲ್ಕು ವರ್ಷಗಳ ಹಿಂದೆ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯಲ್ಲಿರುವ ವ್ಯಕ್ತಿಗಳಲ್ಲಿ ಬಾಲಿವುಡ್ ತಾರೆ ಎನ್ನುವ ನಿಟ್ಟಿನಲ್ಲಿ ಸಂಜಯ್‌ದತ್ ಅವರ ವಿಚಾರಣೆಗೆ ಮಹತ್ವವಿದೆ.
ಅಕ್ರಮ ರಿವಾಲ್ವರ್ ಹಾಗೂ ಸ್ಫೋಟಕಗಳನ್ನು ವಶದಲ್ಲಿರಿಸಿದ ಕಾರಣಕ್ಕೆ ಸಂಜಯೇ ಅವರವಿರುದ್ಧ ಕಾನಾನೂಕ್ರಮ ಜರುಗುತ್ತಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ. ಈ ವರೆಗೆ ಒಟ್ಟು 100 ಮಂದಿಯಲ್ಲಿ 73 ಮಂದಿಯನ್ನು ಶಿಕ್ಷಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಕುರಿತು ಮೊಕದ್ದಮೆ ಎದುರಿಸುತ್ತಿರುವ ಸಂಜಯ್‌ದತ್, ಇದುವರೆಗೆ ಸುಮಾರು ಒಂದೂ ವರೆ ವರ್ಷಕಾಲ ವಿಚಾರಣಾಧೀನ ಅವಧಿ ಮುಗಿಸಿದ್ದಾರೆ. ಈ ಅವಧಿಯೇ ಶಿಕ್ಷೆಯಷ್ಟಾಗಿ ಹೋಯಿತು ಅನ್ನುವುದು ಅವರ ವಕೀಲರ ವಾದ. ಆದರೆ ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆಯವರ ಅಂತಿಮ ತೀರ್ಪು ಕುತೂಹಲ ಕೆರಳಿಸಿದೆ.
ಟಾಡಾ ನ್ಯಾಯಾಲಯದ ವಿಚಾರಣಾ ಪಟ್ಟಿಯಲ್ಲಿ ಉಲಿದ್ರುವ 27 ಮಂದಿಯಲ್ಲಿ ಸಂಜಯ್‌ದತ್, ಆತನ ಗೆಳೆಯರಾದ ಕೇರ್ಸಿ ಅಡಾಜೆನಿಯಾ,ರುಸ್ಸಿ ಮುಲ್ಲಾ, ಯೂಸುಫ್ ನಲ್ವಾಲಾ ಮುಂತಾದವರು ಪ್ರಮುಖರಾಗಿದ್ದಾರೆ. ಗುರುವಾರದ ವಿಚಾರಣೆ ಪ್ರಮುಖವಾಗಿದೆ.
|