ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಪರವಾಗಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯ ಬಿಡುವಿಲ್ಲದ ಕೆಲಸಗಳಿಂದಾಗಿ ದೇಶದ ಆಡಳಿತವನ್ನು ಪ್ರಧಾನ ಮಂತ್ರಿ ಮರೆತಂತಿದೆ, ಇಂದು ಜರುಗಬೇಕಿದ್ದ ಸಚಿವ ಸಂಪುಟ ಸಭೆ ನಾಳೆಗೆ ಮುಂದೂಡಲಾಗಿದೆ.
ಪ್ರತಿ ವಾರ ರೂಢಿಯಂತೆ ಗುರುವಾರ ಜರುಗಬೇಕಿದ್ದ ಕೇಂದ್ರ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಕಾರಣವೆಂದರೆ ಇಂದು ರಾಷ್ಟ್ರಪತಿ ಅಭ್ಯರ್ಥಿಗಾಗಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಕಾಂಗ್ರೆಸ್ ಮುಖಂಡರ ಬಿಡುವಿಲ್ಲದ ಮಾತುಕತೆ ನಡೆಯಲಿದೆ.
ಎಡರಂಗದ ಪಕ್ಷಗಳು, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಮುಂತಾದ ಪ್ರಮುಖರೊಂದಿಗೆ, ವಿವಿಧ ಪಕ್ಷ ಮುಖಂಡರೊಂದಿಗೆ ಮಾತಕತೆ ನಡೆಸಿ ಕಾಂಗ್ರೆಸ್ ಪರವಾಗಿ ರಾಷ್ಟ್ರಪತಿ ಅಭ್ಯರ್ಥಿ ಶಿವರಾಜ್ ಪಾಟೀಲ್ ಅವರಿಗಾಗಿ ಬೆಂಬಲ ಯಾಚಿಸುವ ಪೇರಯತ್ನ ಇದಾಗಿದೆ.
ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯ ಪ್ರಸ್ತುತ ಪಕ್ಷದ ಕಾರ್ಯಕಲಾಪಗಳ ನೆಪದಲ್ಲಿ ಇಂದು ಜರುಗಬೇಕಿದ್ದ ಸಂಪುಟ ಸಭೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನಾಳೆಗೆ ಮುಂದೂಡಿದ್ದಾರೆ ಎನ್ನುವುದು, ಹೈಕಮಾಂಡ್ ಪರ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ ಎಂಬುದನ್ನು ಸೂಚಿಸಿದೆ ಎಂಬುದಾಗಿ ವಿಪಕ್ಷ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ .
|