ಕಳೆದೆರಡು ದಿನಗಳಿಂದ ಮುಷ್ಕರ ನಿರತರಾಗಿರುವ ಇಂಡಿಯನ್ ವಾಯುಯಾನ ಸಂಸ್ಥೆಯ ಕಚೇರಿ ನೌಕರರ ಕ್ರಮ ಕಾನೂನುಬಾಹಿರ ಎಂಬುದಾಗಿ ಕಳೆದ ರಾತ್ರಿ ದೆಹಲಿ ಉಚ್ಛನ್ಯಾಯಾಲಯ ಘೋಷಿಸಿದೆ. ಮುಷ್ಕರ ತೀವ್ರಗೊಳಿಸಲು ನೌಕರರು ನಿರ್ಧರಿಸಿದ್ದಾರೆ.
ನ್ಯಾಯಮೂರ್ತಿ ಜೆ ಪಿ ಸಿಂಗ್ ಅವರು ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿ ನೀಡಿರುವ ಆದೇಶದಂತೆ, ಮುಷ್ಕರ ಕಾನೂನು ಬಾಹ್ರ ಆದ್ದರಿಂದ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದಿದ್ದಾರೆ. ದೆಹಲಿ ವಿಮಾನ ನಿಲ್ದಾಣದ 200 ಮೀ. ಸುತ್ತಳತೆಯಲ್ಲಿ ಪ್ರತಿಭಟನೆ ನಿಷೇಧಿಸಲಾಗಿದೆ.
ಏರ್ ಕಾರ್ಪೋರೇಷನ್‌ಗೆ ಸೇರಿದ 13,000 ನೌಕರರು ಏರ್ ಕಾರ್ಪೋರೇಷನ್ ಎಂಪ್ಲೋಯಿಸ್ ಯೂನಿಯನ್ ಆಶ್ರಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ಕಾನೂನು ಬಾಹಿರ ಎಂದು ಮುಖ್ಯ ಕಾರ್ಮಿಕ ಆಯುಕ್ತರು ಉಲ್ಲೇಖಿಸಿ , ಮುಷ್ಕರ ನಿರತರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿದ್ದಾರೆ.
ತನ್ಮಧ್ಯೆ, ವಾಯುಯಾನ ಸಂಸ್ಥೆಯ ಆಡಳಿತ ಮಂಡಳಿಯು ನೌಕರರ ಸಂಘಟನೆಯ ವಿರುದ್ಧ ಕಾನೂನುಕ್ರಮ ಘೋಷಿಸಿದೆ, 23 ಮಂದಿ ಮುಷ್ಕರ ನಿರತ ನೌಕರನ್ನು ಅಮಾನತುಗೊಳಿಸಿದೆ. ತನ್ಮಧ್ಯೆ ವಾಯುಯಾನ ಸಂಸ್ಥೆಯ 12,000 ನೌಕರರು ಮುಷ್ಕರ ನಿರತರಾಗಿದ್ದಾರೆ.
ವಿಮಾನ ರದ್ದು: ವಾಯುಯಾನ ಸಂಸ್ಥೆಯ ನೌಕರರ ಮುಷ್ಕರದಿಂದಾಗಿ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಲವು ವಿಮಾನಗಳನ್ನು ರದ್ದುಪಡಿಸಲಾಗಿದೆ.
|