ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಿಂಚು- ಮಕ್ಕಳೂ ಸೇರಿ 10 ಬಲಿ
webdunia
ಸಿಡಿಲು ಹಾಗೂ ಭಾರೀ ಮಳೆಯಿಂದ ತತ್ತರಿಸಿರುವ ಜಾರ್ಖಂಡಿನಲ್ಲಿ ಕಳೆದ 12 ತಾಸುಗಳವಧಿಯಲ್ಲಿ ಕನಿಷ್ಠಪಕ್ಷ 10 ಮಂದಿ ಮಿಂಚು-ಸಿಡಿಲಿನ ಆಘಾತದಿಂದ ಸಾವನ್ನಪ್ಪಿದ್ದಾರೆ.

ಮೃತಪಟ್ಟವರಲ್ಲಿ 6 ಮಂದಿಮಕ್ಕಳೂ ಸೇರಿದ್ದು, ಇತರರು ಪ್ರೌಢರು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾು ಇತರ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ತನ್ಮಧ್ಯೆ ರಾಂಪುರ್‌ನಲ್ಲಿ ತರಗತಿಗಳಲ್ಲಿ ವ್ಯಾಸಂಗನಿರತ ವಿದ್ಯಾರ್ಥಿಗಳ ಮೇಲೆ ಸಿಡಿಲು ಅಪ್ಪಳಿಸಿ ಹಲವರು ಗಾಯಗೊಂಡಿದ್ದಾರೆ. ಬಿರುಸಿನ ಮಳೆ, ಗಾಳಿ ಸಿಡಿಸನಿಂದಾಗಿ ರಾಜ್ಯದಲ್ಲಿ ಜನಜೀವನ ಸಂಕಷ್ಟಕ್ಕೀಡಾಗಿದೆ.

ಪಶ್ಚಿಮಬಂಗಾಳ: ಪಶ್ಚಿಮ ಬಂಗಾಳದಲ್ಲಿ ಕಳೆದ 24 ತಾಸುಗಳವಧಿಯಲ್ಲಿ ಕುಂಭದ್ರೋಣ ಮಳೆಯಿಂದ ರಾಜಧಾನಿ ಕೊಲ್ಕೊತ್ತಾ ಸೇರಿದಂತೆ ಪ್ರದೇಶಗಳು ಜಲಾವೃತವಾಗಿವೆ.

ತಗ್ಗುಪ್ರದೇಶಗಳು ನೆರೆಹಾವಳಿಗೆ ತುತ್ತಾಗಿವೆ. ನೆರೆಹಾವಳಿಯಿಂದಾಗಿ ರೈಲು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಿಂಚಿನಿಂದಾಗಿ ಕೊಲ್ಕೊತ್ತಾ ವಿಮಾನ ನಿಲ್ದಾಣ ಒಂದು ತಾಸು ಕಾಲ ಸ್ಥಗಿತಗೊಳಿಸಬೇಕಾಗಿ ಬಂತು.
ಮತ್ತಷ್ಟು
ಕಾನೂನುಬಾಹಿರ ಹೈಕೋ- ಮುಂದುವರಿದ ಸಂಪು
ಪ್ರಧಾನಿಯ ಪಕ್ಷಕೆಲಸಕ್ಕಾಗಿ ಸಂಪುಟ ಸಭೆ ಮುಂದಕ್ಕೆ!
ಸಂಜಯ್‌ ದತ್ ತೀರ್ಪಿಗಾಗಿ ಕಾತರ
ಗಾಂಧೀಜಿ ಮೊಮ್ಮಗ ನಿಧನ- ಪರಿವಾರ ಆಗಮನ
ನಾಳೆ ಸಂಜಯ್‌ ದತ್ ತೀರ್ಪು ನಿರೀಕ್ಷೆ
ದಾವೂದ್‌ ಸೋದರನಿಗೆ ಕ್ಲೀನ್‌ಚಿಟ್