ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ದೆಹಲಿ, ಕರ್ನಾಟಕಗಳಲ್ಲೂ ಕೇರಳದ ಗುನ್ಯಾ
webdunia
ಪ್ರಚಲಿತ ವರ್ಷದ ಮುಂಗಾರು ಹಂಗಾಮಿನಲ್ಲಿ ಕೇರಳದಿಂದ ಆರಂಭವಾಗಿರುವ 'ಚಿಕೂನ್‌ ಗುನ್ಯ' ಸೊಳ್ಳೆಯಿಂದ ಹರಡುವ ಜ್ವರವು ಇದೀಗ ತಮಿಳ್ನಾಡು, ಕರ್ನಾಟಕ, ದೆಹಲಿಗಳಲ್ಲೂ ತನ್ನ ಅಸ್ತಿತ್ವ ಪ್ರದರ್ಶಿಸಿದೆ.

ಕೇರಳ ರಾಜ್ಯದಲ್ಲಿ ಜನಜೀವನವನ್ನು ದಿಗ್ಮೂಢಗೊಳಿಸಿ 50 ಮಂದಿಯ ಜೀವ ಬಲಿತೆಗೆದು ಕೊಂಡು, ಆರೋಗ್ಯಕಾರ್ಯಾಚರಣೆಯ ಹೊಣೆಯನ್ನು ಸೇನೆಗೆ ವಹಿಸಿರುವ ಬೆನ್ನಲ್ಲೇ, ತಮಿಳು ನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಚುಕೂನ್ ಗುನ್ಯಾ ಪ್ರಕರಣ ವರದಿಯಾಗಿದೆ.

ತನ್ಮಧ್ಯೆ ಕರ್ನಾಟಕದಲ್ಲಿ ಮೈಸೂರು ಹಾಗೂ ನೆರೆಯ ಪ್ರದೇಶಗಳಲ್ಲಿ ಈ ಜ್ವರ ಬಾಧೆ ಕಂಡು ಬಂದಿದೆ. ಈ ವರೆಗೆ 80 ಮಂದಿಗೆ ಪ್ರಸ್ತುತ ಜ್ವರ ದೃಢ ಪಟ್ಟಿದೆ. ವೈದ್ಯರ ತಂಡ ಕಾರ್ಯಾಚರಣೆಗೆ ಬಿರುಸುಗೊಳಿಸಿದೆ.

ದೇಶದ ರಾಜಧಾನಿಯಲ್ಲೂ ಚುಕೂನ್‌ ಗುನ್ಯ ಕಾಣಿಸಿಕೊಂಡಿದೆ. ಇಲ್ಲಿ ಕೆಲವೊಂದು ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಇದರ ವಿಸ್ತಾರದ ಕುರಿತು ಇನ್ನಷ್ಟು ವರದಿಗಳನ್ನು ನಿರೀಕ್ಷಿಸಲಾಗಿದೆ.
ಮತ್ತಷ್ಟು
ಮಿಂಚು- ಮಕ್ಕಳೂ ಸೇರಿ 10 ಬಲಿ
ಕಾನೂನುಬಾಹಿರ ಹೈಕೋ- ಮುಂದುವರಿದ ಸಂಪು
ಪ್ರಧಾನಿಯ ಪಕ್ಷಕೆಲಸಕ್ಕಾಗಿ ಸಂಪುಟ ಸಭೆ ಮುಂದಕ್ಕೆ!
ಸಂಜಯ್‌ ದತ್ ತೀರ್ಪಿಗಾಗಿ ಕಾತರ
ಗಾಂಧೀಜಿ ಮೊಮ್ಮಗ ನಿಧನ- ಪರಿವಾರ ಆಗಮನ
ನಾಳೆ ಸಂಜಯ್‌ ದತ್ ತೀರ್ಪು ನಿರೀಕ್ಷೆ