ಯುಪಿಎ ಒಕ್ಕೂಟದ ರಾಷ್ಟ್ರಪತಿಅಭ್ಯರ್ಥಿ ಬೆಂಬಲಕ್ಕಾಗಿ ಡಿಎಂಕೆ ಹಾಗೂ ಎಡರಂಗ ಪಕ್ಷಗಳು ಇಂದಿಲ್ಲಿ ನಡೆಸಿದ ಮಾತುಕತೆ ಮೊದಲ ಹಂತದಲ್ಲಿ ಸಫಲವಾಗದಿರುವ ಹಿನ್ನೆಲೆಯಲ್ಲಿ ಸಂಜೆ ಮತ್ತೆ ಮಾತುಕತೆ ಮುಂದುವರಿಸಲು ನಿರ್ಧರಿಸಲಾಗಿದೆ.
ಎಡರಂಗದ ಪರವಾಗಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸಿಪಿಐ ಪ್ರಧಾನ ಕಾರ್ಯದರ್ಶಿ ಎ ಬಿ ಬರ್ದಾನ್ ಮತ್ತು ಡಿ ರಾಜಾ ಇವರು ಡಿಎಂಕೆ ಮುಖ್ಯಸ್ಥ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಭೇಟಿ ಮಾಡು ಮಾತುಕತೆ ನಡೆಸಿದ್ದರು.
ಬಳಿಕ ಕರುಣಾನಿಧಿಯವರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಸುದೀರ್ಘ 30 ನಿಮಿಷಗಳ ಕಾಲ ನಡೆಯಿತು.
ಕಾಂಗ್ರೆಸ್ ಮೂರು ಹೆಸರುಗಳನ್ನು ಸೂಚಿಸಿತ್ತಲ್ಲವೇ ಎಂಬ ಪ್ರಶ್ನೆಗೆ ಸಿಪಿಐನ ಬರ್ದಾನ್ ನಮಗೆಯಾವ ಹೆಸರನ್ನೂ ತಿಳಿಸಿಲ್ಲ ಎಂದರು. ನಾವು ಕೇವಲ ರಾಷ್ಟ್ರಪತಿಯಾಗುವವರ ಕುರಿತಾದ ದೃಷ್ಟಿಕೋನಗಳನ್ನಷ್ಟೇ ಹಂಚಿಕೊಂಡಿದ್ದೇವೆ ಎಂದು ಪ್ರಕಾಶ್ ಕಾರಟ್ ತಿಳಿಸಿದ್ದಾರೆ.
|