ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಇಂದು ಆರೋಪಿ ಸಲೀಂ ಶೇಕ್ ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪಿತ್ತಿದೆ.
ಸಲೀಂ ಕುರಿತಾದ ಆರೋಪವೆಂದರೆ 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಸ್ಫೋಟದ ವೇಳೆ ಮಾಹಿಂ ನಲ್ಲಿರುವ ಮೀನುಗಾರರ ಕಾಲೋನಿಯಲ್ಲಿ ಬಾಂಬ್ ಎಸೆದು ಆಸ್ತಿ-ಜೀವ ಹಾನಿಗೆ ಕಾರಣವಾಗಿರುವುದಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣವನ್ನು ವಿಚಾರಿಸಿದ ನ್ಯಾಯಾಲಯವು ಆತನಿಗೆ ಜೀವಾವವಧಿ ಶಿಕ್ಷೆ ವಿಧಿಸಿದೆ. ಟಾಡಾ ನ್ಯಾಯಾಲಯದಲ್ಲಿ ಇತರ ಆರೋಪಿಗಳ ವಿಚಾರಣೆ ಪ್ರಗತಿಯಲ್ಲಿದೆ.
ಸಂಜಯ್‌ದತ್: ಬಾಲಿವುಡ್ ನಟ ಸಂಜಯ್‌ತ್ ಇಂದು ಮುಂಬೈಯ ವಿಶೇಷ ಟಾಡಾ ನ್ಯಾಯಾಲಯದ ಮುಂದೆ ಹಾಜರಾಗಿರುವುದಾಗಿ ಮಾಹಿತಿ ಲಭಿಸಿದೆ. ಲಿವುಡ್‌ಕ್ಕೆ ಹಾಜರಾಗಲಿದ್ದು, ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.
|