ಸರ್ಕಾರಿ ಸ್ವಾಮ್ಯದ ಇಂಡಿಯನ್ ವಾಯುಯಾನ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದ್ದು, ಕೆಲವೇ ಗಂಟೆಗಳಲ್ಲಿ ವಾಯುಸಂಚಾರ ಪೂರ್ವಸ್ಥಿತಿಗೆ ಮರಳಲಿದೆ.
ಮಂಗಳವಾರದಿಂದೀಚೆಗೆ ಮುಷ್ಕರನಿರತರಾಗಿರುವ ವಾಯುಯಾನ ಸಂಸ್ಥೆಯ ನೌಕರರು ಗುರುವಾರದಂದು ನಾಗರಿಕ ವಾಯುಯಾನ ಮಂತ್ರಲಾಯ ಹಾಗೂ ಆಡಳಿತ ಮಂಡಿ ವರಿಷ್ಠರೊಂದಿಗೆ ಮಾತುಕತೆಯ ಬಳಿಕ ಮುಷ್ಕರ ಕೊನೆಗೊಳಿಸಿರುವುದಾಗಿ ಘೋಷಿಸಿದರು.
ನಾಗರಿಕ ವಾಯಯಾನ ಇಲಾಖೆ ಕಾರ್ಯದರ್ಶಿ ಅಶೋಕ್ ಚಾವ್ಲಾ ಅವರು ಮು್ಕರ ನಿರತರೊಂದಿಗೆ ಸುಮಾರು ಮೂರು ತಾಸುಗಳ ಕಾಲ ಸಂಧಾನ ಮಾತುಕತೆ ನಡೆಸಿ, ಮುಷ್ಕರವನ್ನು ಕೊನೆಗೊಳಿಸಲಾಗಿದೆ, ಬೇಡಿಕೆಗಳನ್ನು ಆತ್ಮೀಯವಾಗಿ ಇತ್ಯರ್ಥಗೊಳಿಸಲಾಗಿದೆ ಎಂದರು.
ಇಂಡಿಯನ್ ವಾಯುಯಾನ ಸಂಸ್ಥೆಯ ಸುಮಾರು 13,000 ಮಂದಿ ಸಿಬ್ಬಂದಿಗಳು ಮುಷ್ಕರದಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ವಿಮಾನಗಳು ವೇಳಾ ಪಟ್ಟಿಗನುಸರಿಸಿ ಸಂಚಾರ ಆರಂಭಿಸುವುದರೊಂದಿಗೆ ವಿವಿಧ ನಿಲ್ದಾಣಗಳಲ್ಲಿದ್ದ ಸಮಸ್ಯೆ ಪರಿಹಾರಕಾಣಲಿದೆ.
ತನ್ಮಧ್ಯೆ, 23 ಸಿಬ್ಬಂದಿಗಳ ಅಮಾನತು, ಹೈಕೋರ್ಟ್ 'ಕಾನೂನು ಬಾಹಿರ' ಆದೇಶದ ಪರಿಣಾಮಗಳೇನು ಎಂಬ ಕುರಿತು ಇನ್ನಷ್ಟೇ ತಿಳಿದು ಬರಬೇಕಿದೆ.
|